ಪ್ರತಿ ದಿನದ ಹೊಸ ಮಾಹಿತಿಗಾಗಿ ನಮ್ಮ ಗುಂಪುಗಳಿಗೆ ಸೇರಿ Samagra Mahiti     Samagra Mahiti

ಶನಿವಾರ, ಜನವರಿ 14, 2023

NEET Long term ತರಬೇತಿಗೆ ಅರ್ಜಿ ಆಹ್ವಾನ!

 ವಸತಿಯುತ NEET Long term ತರಬೇತಿಗೆ ಅರ್ಜಿ ಆಹ್ವಾನ!

ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗಳ ಅಧ್ಯಯನ ಸಾಮಾಗ್ರಿ , ತರಬೇತಿ ಹಾಗೂ ಮಾರ್ಗದರ್ಶನ ಕೊರತೆಯಿಂದಾಗಿ NEET ನಂತಹ ಪ್ರವೇಶ ಪರೀಕ್ಷೆಯಲ್ಲಿ ಅರ್ಹತಾ ಅಂಕ ಗಳಿಸಲು ಸಾಧ್ಯವಾಗದೆ , ಪರಿಶಿಷ್ಠಿತ ಕೋರ್ಸುಗಳಾದ MBBS , BDS , BMS , BAMS ಮೊದಲಾದ ಕೋರ್ಸುಗಳ ಪ್ರವೇಶದಿಂದ ವಂಚಿತರಾದಂತಹ ದ್ವಿತೀಯ ಪಿ.ಯು.ಸಿ ಯಲ್ಲಿ ಉತ್ತೀರ್ಣರಾದ 2022-23 ನೇ ಸಾಲಿನ NEET ಪ್ರವೇಶ ಪರೀಕ್ಷೆಗೆ ಸಿದ್ಧತೆ ಮಾಡುಕೊಳ್ಳುತ್ತಿರುವ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಗುಣಮಟ್ಟದ ಖಾಸಗಿ NEET ತರಬೇತಿ ಸಂಸ್ಥೆಗಳ ಸಹಯೋಗದಲ್ಲಿ ವಸತಿಯುತ " Exclusive Long term ” ತರಬೇತಿ ಆಯೋಜಿಸಲು ಉದ್ದೇಶಿಸಲಾಗಿದ್ದು . ವಿವರ ಈ ಕೆಳಕಂಡಂತಿದೆ. 

ತರಬೇತಿ ಯೋಜನೆ:( Training Project ) : 

2021-22 ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ , 2022-23 ನೇ ಸಾಲಿನ NEET ಪರೀಕ್ಷೆಗಾಗಿ ಒಂದು ವರ್ಷ ಪೂರ್ಣ ಪ್ರಮಾಣದಲ್ಲಿ ತಯಾರಿ ಆಸಕ್ತರಿರುವ 200 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ಪ್ರವೇಶ ನಡೆಸಲು ಅಂತಹ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಗುಣಮಟ್ಟ ಹೊಂದಿರುವ ಖಾಸಗಿ ತರಬೇತಿ ಸಂಸ್ಥೆಗಳ ಮೂಲಕ NEET ತರಬೇತಿಯನ್ನು ಬೆಂಗಳೂರು / ಮಂಗಳೂರು ನಗರದಲ್ಲಿ ನೀಡಲಾಗುತ್ತದೆ.

ತರಬೇತಿಯ ಸ್ಥಳ:

 ಬೆಂಗಳೂರು ಅಥವಾ ಮಂಗಳೂರು ನಗರದಲ್ಲಿ ವಸತಿಯುತ NEET Long term ತರಬೇತಿ ನೀಡುವುದು 

ಅಭ್ಯರ್ಥಿಗಳು ಹೊಂದಿರಬೇಕಾದಂತಹ ಅರ್ಹತೆಗಳು : 

ಕರ್ನಾಟಕದಲ್ಲಿ ಖಾಯಂ ನಿವಾಸಿಯಾಗಿರಬೇಕು.

ಕರ್ನಾಟಕ ಸರ್ಕಾರವು ಅಧಿಸೂಚಿರುವ ಪರಿಶಿಷ್ಟ ಜಾತಿಗೆ ಸೇರಿರಬೇಕು. ಕುಟುಂಬ ವಾರ್ಷಿಕ ಆದಾಯ ರೂ .5.00 ಲಕ್ಷ ಮೀರಿರಬಾರದು. 

ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು.  

2022-23 ನೇ ಸಾಲಿನ NEET ಪ್ರವೇಶ ಪರೀಕ್ಷೆ ಬರೆಯಲು ಆಸಕ್ತರಿರಬೇಕು.

2022-23 ನೇ ಸಾಲಿನ NEET ಪ್ರವೇಶಗೆ ತಯಾರಿ ನಡೆಸುತ್ತಿರಬೇಕು.

ಅಭ್ಯರ್ಥಿಗಳ ಆಯ್ಕೆ : 

2022-23 ನೇ ಸಾಲಿನ NEET ಪ್ರವೇಶ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದವರು ಹಾಗೂ . 

JEE - mains ಪ್ರವೇಶ ಪರೀಕ್ಷೆಯಲ್ಲಿ ಅರ್ಹತಾ ಅಂಕ ಪಡೆದು 

JEE - Advance ಪ್ರವೇಶ ಪರೀಕ್ಷೆ ಬರೆಯಲು ಅರ್ಹರಾದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

ಒಂದೊಮ್ಮೆ ಮೇಲೆ ವಿವರಿಸಿರುವ ಅರ್ಹತೆ ಹೊಂದಿರುವ ವಿದ್ಯಾರ್ಥಿಗಳು ಲಭ್ಯವಿಲ್ಲದಿದ್ದರೆ , ದ್ವೀತಿಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ 85 % ಕ್ಕಿಂತ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳಿಗೆ ನಿಗದಿತ ಗುರಿಗೆ ಅನುಗುಣವಾಗಿ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಅಭ್ಯರ್ಥಿಗಳ ಹಂಚಿಕೆ : 

2022-23 ನೇ ಸಾಲಿಗೆ 200 ಅಭ್ಯರ್ಥಿಗಳ ಗುರಿಯನ್ನು ನಿಗಧಿಪಡಿಸಿಕೊಳ್ಳಲಾಗಿದ್ದು , ಅದರಲ್ಲಿ ಕೆಳಕಂಡಂತೆ ಸ್ಥಾನವನ್ನು ಹಂಚಲಾಗುವುದು. 

1. ಕರ್ನಾಟಕ ವಸತಿ ಶಿಕ್ಷಣ ಸಂಘದ ಕಾಲೇಜುಗಳಲ್ಲಿ  ಅಧ್ಯಯನ ಮಾಡಿದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು 30 %

2. ಸರ್ಕಾರಿ ಹಾಸ್ಟೆಲ್ ಗಳಲ್ಲಿ ಕನಿಷ್ಠ 02 ವರ್ಷ ಅಧ್ಯಯನ ಮಾಡಿದ ಪರಿಶಿಷ್ಟ ಜಾತಿ ಅಭ್ಯರ್ಥಿಗಳು 20%  

3. ಸಾಮಾನ್ಯ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು 50 % 

ಒಂದೊಮ್ಮೆ ನಿಗದಿತ ಗುರಿಗೆ ಅನುಗುಣವಾಗಿ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ , ಇತರೆ ಅರ್ಹ ಪರಿಶಿಷ್ಟ ಜಾತಿ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದು.

ತರಬೇತಿ ಸೌಲಭ್ಯ : 

ಆಯ್ಕೆಯಾದ ಅಭ್ಯರ್ಥಿಗಳಿಗೆ ಟೆಂಡರ್ ನಲ್ಲಿ ಎಂಪಾನಲ್ ಗೊಂಡ ತರಬೇತಿ ಸಂಸ್ಥೆಗಳ ಸಹಯೋಗದಲ್ಲಿ ಭೌತಿಕವಾಗಿ ತರಬೇತಿಯನ್ನು ನೀಡಲಾಗುವುದು.

2022-23ನೇ ಸಾಲಿನ NEET ಪ್ರವೇಶ ಪರೀಕ್ಷೆ ಪ್ರಾರಂಭವಾಗುವವರೆಗೂ ಉಚಿತವಾಗಿ ಊಟ - ವಸತಿ , ತರಬೇತಿ ನೀಡಲಾಗುವುದು.

ತರಬೇತಿ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ Study Materils , Digital Materials ಗಳನ್ನು ಒದಗಿಸಲಾಗುವುದು . ಆಯ್ಕೆಯಾದ ಅಭ್ಯರ್ಥಿಗಳ ತರಬೇತಿಯನ್ನು ಬೆಂಗಳೂರು / ಮಂಗಳೂರು ನಗರದಲ್ಲಿ ಮಾತ್ರ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ : 

ನಿಗಧಿತ ಅರ್ಜಿ ನಮೂನೆಯನ್ನು ಇಲಾಖಾ ವೆಬ್ ಸೈಟ್ ವಿಳಾಸ sw.kar.nic.in ನಲ್ಲಿ ಅಳವಡಿಸಲಾಗಿದ್ದು , ಆಸಕ್ತ ಅಭ್ಯರ್ಥಿಗಳು ಸದರಿ ಲಿಂಕ್ ಮೂಲಕ online ನಲ್ಲಿಯೇ ಅರ್ಜಿ ಸಲ್ಲಿಸಬೇಕಿದೆ. ಅರ್ಜಿಯನ್ನು ಈ ಸಲ್ಲಿಸಬೇಕಾಗಿರುತ್ತದೆ. ಕೆಳಕಂಡ ದಾಖಲೆಗಳೊಂದಿಗೆ 

ಜಾತಿ ಪ್ರಮಾಣ ಪತ್ರ 

ಆದಾಯ ಪ್ರಮಾಣ ಪತ್ರ 

ಎಸ್.ಎಸ್.ಎಲ್.ಸಿ ಅಂಕ ಪಟ್ಟಿ

ಪಿ.ಯು.ಸಿ ಅಂಕ ಪಟ್ಟಿ 

ಹೆಚ್ಚಿನ ಮಾಹಿತಿಗಾಗಿ 👇👇

ಬುಧವಾರ, ಜನವರಿ 11, 2023

ಪರಿಸ್ಕೃತ ವರ್ಗಾವಣೆಯ ವೇಳಾಪಟ್ಟಿ ಪ್ರಕಟ!

 ಪರಿಸ್ಕೃತ ವರ್ಗಾವಣೆಯ ವೇಳಾಪಟ್ಟಿ ಪ್ರಕಟ!

 ಈಗಾಗಲೇ ಮಾರ್ಗಸೂಚಿ ಸಹಿತ ವರ್ಗಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಕೆಲವು ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದಾಗಿ ಹೆಚ್ಚುವರಿ ಶಿಕ್ಷಕರ ಅಂತಿಮ ಆಧ್ಯತಾ ಪಟ್ಟಿಯನ್ನು ಪ್ರಕಟಣೆಯನ್ನು ಮುಂದೂಡಲಾಗಿತ್ತು. ಪ್ರಸ್ತುತ ವರ್ಗಾವಣಾ ವೇಳಾಪಟ್ಟಿಯನ್ನು ಕೆಳಕಂಡಂತೆ ಪರಿಷ್ಕರಿಸಿದೆ . ಉಳಿದಂತೆ ದಿನಾಂಕ : 26 / 12 / 2022 ರಂದು ಹೊರಡಿಸಲಾದ ವರ್ಗಾವಣಾ ಅಧಿಸೂಚನೆಯಲ್ಲಿಯಲ್ಲಿರುವ ಎಲ್ಲಾ ಮಾರ್ಗಸೂಚಿ ಅಂಶಗಳು ಯಥಾವತ್ತಾಗಿ ಮುಂದುವರೆಯುತ್ತದೆ. ಈ ವೇಳಾಪಟ್ಟಿಯ ಜೊತೆಯಲ್ಲಿ ಸದರಿ ಮಾರ್ಗಸೂಚಿ ಅಂಶಗಳನ್ನು ಓದಿಕೊಳ್ಳತಕ್ಕದ್ದು. 

ಅಭ್ಯರ್ಥಿಗಳಿಗೆ ಸೂಚನೆ : 

ವರ್ಗಾವಣಾ ತಂತ್ರಾಂಶದಲ್ಲಿ ಶಿಕ್ಷಕರು ಅರ್ಜಿ ಸಲ್ಲಿಸುವಾಗ ವಿನಾಯಿತಿ / ಆಧ್ಯತೆ ಕೋರುವ ದಾಖಲೆಗಳನ್ನು ಮತ್ತು ಇತರ ಸೇವಾ ಮಾಹಿತಿಯನ್ನು ಬಹಳ ಎಚ್ಚರಿಕೆಯಿಂದ ಅಪ್‌ಲೋಡ್ ಮಾಡತಕ್ಕದ್ದು , ತಪ್ಪಾಗಿ ಅರ್ಜಿ ಸಲ್ಲಿಸಿ ನಂತರ ತಪ್ಪು ಎಂದು ಕಂಡುಬಂದ ನಂತರ ತಿದ್ದುಪಡಿಗೆ ಹಾಗೂ ಪುನರ್ ಪರಿಶೀಲಿಸಿ ಹೊಸದಾಗಿ ಅರ್ಜಿ ಸಲ್ಲಿಸಲು ಯಾವುದೇ ಕಾರಣಕ್ಕೂ ಅವಕಾಶ ಕಲ್ಪಿಸಲಾಗುವುದಿಲ್ಲ.

ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಹಾಗೂ ತತ್ಸಮಾನ ( ಗ್ರೂಪ್ - ಬಿ ) ವೃಂದದ ಅಧಿಕಾರಿಗಳು ಪತಿ ಅಥವಾ ಪತ್ನಿ ಸರ್ಕಾರಿ ನೌಕರರ ಪ್ರಕರಣದಲ್ಲಿ ನೇಮಕಾತಿ ಪ್ರಾಧಿಕಾರದಿಂದ ( ಆಯುಕ್ತರಿಂದ ) ಸೇವಾ ಪ್ರಮಾಣ ಪತ್ರ ಪಡೆಯಬೇಕು ಎಂದಿದ್ದು , ಅರ್ಜಿ ಸಲ್ಲಿಸಲು ಆಗುವ ವಿಳಂಬವನ್ನು ತಪ್ಪಿಸಲು ಅನುಕೂಲವಾಗುವಂತೆ ಆಯಾ ಜಿಲ್ಲಾ ಉಪನಿರ್ದೆಶಕರು ( ಆಡಳಿತ ) ಇವರಿಂದ ಸೇವಾ ಪ್ರಮಾಣ ಪತ್ರವನ್ನು ಪಡೆಯಲು ತಿಳಿಸಿದೆ. ಉಳಿದಂತೆ ಹೊರಡಿಸಲಾಗಿರುವ ಮಾರ್ಗಸೂಚಿ ಅಂಶಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಎಂದು ತಿಳಿದುಬಂದಿದೆ. ( ಮಾನ್ಯ ಆಯುಕ್ತರಿಂದ ಅನುಮೋದಿಸಲ್ಪಟ್ಟಿದೆ )

ಪರಿಸ್ಕೃತ ವರ್ಗಾವಣೆಯ ವೇಳಾಪಟ್ಟಿ👇👇

ಶುಕ್ರವಾರ, ಜನವರಿ 6, 2023

ಇಲಾಖಾ ಪರೀಕ್ಷೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನ!

ಇಲಾಖಾ ಪರೀಕ್ಷೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ!

2021 ರ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ : ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 12/01/2023 II. 31/01/2023 

ಅರ್ಜಿ ಸಲ್ಲಿಸುವ ವಿಧಾನ : 

ಇಲಾಖಾ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕರ್ನಾಟಕ ಲೋಕಸೇವಾ ಆಯೋಗದ ( KPSC ) ವೆಬ್‌ಸೈಟ್ http://www.kpsc.kar.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವ ವಿಧಾನಕ್ಕಾಗಿ ಅನುಬಂಧ -1 ರಲ್ಲಿನ ಮಾಹಿತಿಯನ್ನು ನಮೂದಿಸಲಾಗಿದೆ . 

ಅರ್ಹತೆ : 

I. ಈ ಕೆಳಕಂಡ ನೌಕರರು ಇಲಾಖಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ . 

ಅ ) ಸರ್ಕಾರಿ ನೌಕರರು . 

ಆ ) ಸರ್ಕಾರಿ ಸ್ವಾಮ್ಯಕ್ಕೊಳಪಟ್ಟ ನಿಗಮ / ಮಂಡಳಿ / ಸ್ಥಳೀಯ ಸಂಸ್ಥೆಗಳು / ವಿಶ್ವವಿದ್ಯಾಲಯಗಳ / ಪ್ರಾಧಿಕಾರಗಳ ಖಾಯಂ ನೌಕರರು , ಗ್ರೂಪ್ - ' ಡಿ ' ನೌಕರರು ಇಲಾಖಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಅಭ್ಯರ್ಥಿಗಳಿಗೆ ವಿಶೇಷ ಸೂಚನೆಗಳು : 

ಅ ) ಇಲಾಖಾ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಸಂಬಂಧ ಅಭ್ಯರ್ಥಿಗಳು ಅನುಬಂಧ -2 ರಲ್ಲಿನ ಸೂಚನೆಗಳನ್ನು ಓದಿಕೊಳ್ಳತಕ್ಕದ್ದು.

ಆ ) ಸಬಾರ್ಡಿನೇಟ್ ಅಕೌಂಟ್ಸ್ ಸರ್ವೀಸಸ್ ( ಎಸ್.ಎ.ಎಸ್ . ) ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಅಭ್ಯರ್ಥಿಗಳು ಅನುಬಂಧ -3 ರಲ್ಲಿನ ವಿಶೇಷವಾದ ಸೂಚನೆಗಳನ್ನು ನಮೂದಿಸಲಾಗಿದೆ.

ಇ ) ಇಲಾಖಾ ಪರೀಕ್ಷೆಗಳನ್ನು ಆಪ್ ಲೈನ್ ಓಎಂಆರ್ ಮಾದರಿ ( Offline / OMR type ) ಅಥವಾ ಗಣಕ ಯಂತ್ರದ ಮೂಲಕ ( Computer Based Test - CBT ) ಮುಖಾಂತರ ನಡೆಸಲಾಗುವುದು.ಈ ವಿಷಯದಲ್ಲಿ ಆಯೋಗದ ತೀರ್ಮಾನವೇ ಅಂತಿಮವಾಗಿರುತ್ತದೆ

ಈ ) ಆನ್ ಲೈನ್ ಅರ್ಜಿ ಸಲ್ಲಿಸುವಾಗ ಸ್ಪಷ್ಟವಾದ ಇತ್ತೀಚಿನ ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡತಕ್ಕದ್ದು . ಇಲ್ಲವಾದಲ್ಲಿ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಉ ) ಸಕ್ರಿಯವಾಗಿರುವ ಇ - ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಅರ್ಜಿಯಲ್ಲಿ ನಮೂದಿಸತಕ್ಕದ್ದು ಹಾಗೂ ಪರೀಕ್ಷಾ ಪ್ರಕ್ರಿಯೆ ಮುಕಾಯಗೊಳ್ಳುವವರೆಗೂ ಇರತಕ್ಕದ್ದು.

ವಿಷಯ ಸಂಕೇತಗಳು ಮತ್ತು ಪ್ರತಿ ವಿಷಯಕ್ಕೆ ನಿಗದಿಪಡಿಸಿದ ಶುಲ್ಕದ ವಿವರಗಳು : 

ಇಲಾಖಾ ಪರೀಕ್ಷೆಯ ವಿವಿಧ ವಿಷಯಗಳು , ಅವುಗಳ ಸಂಕೇತಗಳು ಹಾಗೂ ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 6 ಸೇಲೋಸೇ 2010 , ದಿನಾಂಕ : 06/08/2010 ರನ್ವಯ ನಿಗದಿಪಡಿಸಿರುವ ಶುಲ್ಕಗಳ ವಿವರಗಳನ್ನು ಅನುಬಂಧ -4 ರಲ್ಲಿ ನಮೂದಿಸಲಾಗಿದೆ. 

ಪರೀಕ್ಷಾ ಕೇಂದ್ರಗಳು : 

ಇಲಾಖಾ ಪರೀಕ್ಷೆಗಳನ್ನು ಒಟ್ಟು 02 ಹಂತಗಳಲ್ಲಿ ನಡೆಸಲು ಉದ್ದೇಶಿಸಲಾಗಿದ್ದು , ಪ್ರಥಮ ಹಂತದಲ್ಲಿ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ , ದ್ವಿತೀಯ ಹಂತದಲ್ಲಿ ಬೆಂಗಳೂರು ಜಿಲ್ಲಾ ಕೇಂದ್ರದಲ್ಲಿ ಮಾತ್ರ ನಡೆಸಲಾಗುವುದು . ಆದಾಗ್ಯೂ ಪರೀಕ್ಷಾ ಕೇಂದ್ರಗಳ ನಿಗದಿಪಡಿಸುವಿಕೆಯು ಆಯೋಗದ ತೀರ್ಮಾನಕ್ಕೊಳಪಟ್ಟಿರುತ್ತದೆ . ಸದರಿ ಮಾಹಿತಿಯನ್ನು ಅನುಬಂಧ -5 ರಲ್ಲಿ ನಮೂದಿಸಲಾಗಿದೆ.

ಪಠ್ಯ ಕ್ರಮ : 

ಇಲಾಖಾ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ವಸ್ತುನಿಷ್ಠ ಬಹು ಆಯ್ಕೆ ಮಾದರಿಯ ಒಟ್ಟು 99 ಪತ್ರಿಕೆಗಳಿಗೆ ಹಾಗೂ ವಿವರಣಾತ್ಮಕ ಮಾದರಿಯ ಒಟ್ಟು 19 ಪತ್ರಿಕೆಗಳಿಗೆ ಪರೀಕ್ಷೆ ನಡೆಸಲಾಗುತ್ತಿದ್ದು , ಮಾಹಿತಿಯನ್ನು ಅನುಬಂಧ -6 ರಲ್ಲಿ ನಮೂದಿಸಲಾಗಿದೆ. 

ಪರೀಕ್ಷಾ ವೇಳಾಪಟ್ಟಿ : 

2021 ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ಒಟ್ಟು 02 ಹಂತಗಳಲ್ಲಿ ನಡೆಸಲು ಉದ್ದೇಶಿಸಿದ್ದು , ಸದರಿ ಪರೀಕ್ಷೆಗಳ ವೇಳಾಪಟ್ಟಿಯನ್ನು ನಂತರದಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಲಾಗುತ್ತದೆ . ವಿನಾಯಿತಿ : ನಿಯಮಾನುಸಾರ ಹಿಂದಿನ ಎರಡು ವರ್ಷಗಳ ಅವಧಿಯಲ್ಲಿ ಇಲಾಖಾ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳ ಆಧಾರದ ಮೇರೆಗೆ ಹಾಗೂ ಅಭ್ಯರ್ಥಿಗಳು ಹೊಂದಿರುವ ಶೈಕ್ಷಣಿಕ ವಿದ್ಯಾರ್ಹತೆ ಮೇರೆಗೆ ಕೆಲವು ವಿಷಯಗಳಿಗೆ / ಪತ್ರಿಕೆಗಳಿಗೆ ವಿನಾಯಿತಿಯನ್ನು ನೀಡಲು ಅವಕಾಶವಿದೆ.

ಅಂಧ / ಅಂಗವಿಕಲ ಅಭ್ಯರ್ಥಿಗಳ ಕುರಿತು

ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 272 ಸನಿನಿ 2013 , ದಿನಾಂಕ : 11/02/2021 ರಂತೆ ಅಂಗವಿಕಲ ನಿಯಮಗಳನ್ವಯ ಪರೀಕ್ಷೆ ಬರೆಯಲು ದೈಹಿಕ ಅಸಮರ್ಥತೆ ಹೊಂದಿರುವ ಅಭ್ಯರ್ಥಿಗಳಿಗೆ ಆಯೋಗವು ಇಲಾಖಾ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ . ಅಂಧ / ದೈಹಿಕ ಅಸಮರ್ಥತೆಯುಳ್ಳ ಅಭ್ಯರ್ಥಿಗಳು ಲಿಪಿಕಾರರ ಸಹಾಯದೊಂದಿಗೆ ಪರೀಕ್ಷೆಗೆ ಹಾಜರಾಗುವ ಕುರಿತಾದ ಮಾಹಿತಿಯನ್ನು ಅನುಬಂಧ -9 ರಲ್ಲಿ ನಮೂದಿಸಲಾಗಿದೆ.

ಕನ್ನಡ ಭಾಷಾ ಪರೀಕ್ಷೆ ಕುರಿತು : 

ಅಖಿತ ಭಾರತ ಸೇವೆಗಳಾದ ಐ.ಎ.ಎಸ್ . , ಐ.ಪಿ.ಎಸ್ . ಮತ್ತು ಐ.ಎಫ್.ಎಸ್ . ಅಭ್ಯರ್ಥಿಗಳು ಕಡ್ಡಾಯವಾಗಿ ವಿಷಯ ಸಂಕೇತ -72 ಅನ್ನು ಆಯ್ಕೆ ಮಾಡಿಕೊಳ್ಳಬೇಕು ಹಾಗೂ ಇತರೆ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ವಿಷಯ ಸಂಕೇತ -47 ನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು . ಮಾಹಿತಿಯನ್ನು ಅನುಬಂಧ -10 ರಲ್ಲಿ ನಮೂದಿಸಲಾಗಿದೆ.

ನೂತನ / ಇತ್ತೀಚಿನ ತಿದ್ದುಪಡಿಗಳು : 

ಇಲಾಖಾ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕೆಲವು ಇಲಾಖೆಗಳ ಪಠ್ಯಕ್ರಮಗಳು ಪರಿಷ್ಕೃತ / ತಿದ್ದುಪಡಿಗೊಂಡಿದ್ದು , ಮಾಹಿತಿಯನ್ನು ಅನುಬಂಧ -11 ರಲ್ಲಿ ನಮೂದಿಸಲಾಗಿದೆ.

ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುವ ವಿಧಾನ :

ಅಭ್ಯರ್ಥಿಗಳು ಇಲಾಖಾ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ವಿಧಾನವನ್ನು ಅನುಬಂಧ -12 ರಲ್ಲಿ ನಮೂದಿಸಲಾಗಿದೆ.

ಪ್ರಮಾಣಪತ್ರಗಳ ವಿತರಣೆ / ನೈಜತೆಯ ಪ್ರಮಾಣಪತ್ರಗಳ ಬಗ್ಗೆ : ಇಲಾಖಾ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಅಭ್ಯರ್ಥಿಗಳು ಮೂಲ ಪ್ರಮಾಣಪತ್ರಗಳನ್ನು ಪಡೆಯುವ ಬಗ್ಗೆ ಹಾಗೂ ಅವುಗಳ ನೈಜತೆಯ ಕುರಿತಂತೆ ಅನುಬಂಧ -13 ರಲ್ಲಿ ನಮೂದಿಸಲಾಗಿದೆ.

ಅಂಕಗಳ ಮರುಎಣಿಕೆ ಕುರಿತು : 

ಇಲಾಖಾ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡ ನಂತರ ಮರು ಮೌಲ್ಯಮಾಪನಕ್ಕೆ ಅವಕಾಶವಿರುವುದಿಲ್ಲ . ಆದರೆ 19 ವಿವರಣಾತ್ಮಕ ಮಾದರಿಯ ಉತ್ತರ ಪತ್ರಿಕೆಗಳಿಗೆ ಸಂಬಂಧಿಸಿದಂತೆ ಅಂಕಗಳ ಮರು ಎಣಿಕೆಗೆ ಅವಕಾಶ ನೀಡಲಾಗಿದೆ ವಿವರಗಳನ್ನು ಅನುಬಂಧ -14 ರಲ್ಲಿ ನಮೂದಿಸಲಾಗಿದೆ. 

(ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಓದಿ)

Notification 👉 Click here

ಗುರುವಾರ, ಜನವರಿ 5, 2023

224 ವಿಧಾನ ಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿ ಕುರಿತು!

224 ವಿಧಾನ ಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿ ಕುರಿತು!

ಭಾರತ ಚುನಾವಣಾ ಆಯೋಗದ ನಿರ್ದೇಶನಗಳನ್ವಯ ಕರ್ನಾಟಕ ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ ಕಾರ್ಯಕ್ರಮ ಅರ್ಹತಾ ದಿನಾಂಕ : 01/01/2023 ರಂತೆ ಮತದಾರರ ಪಟ್ಟಿಯ ಪರಿಷ್ಕರಣೆಯ ಕುರಿತು ದಿನಾಂಕ : 05/01/2023ರ ಈ ದಿನ 221 ವಿಧಾನಸಭಾ ಕ್ಷೇತ್ರಗಳಲ್ಲಿ ಅಂತಿಮ ಮತದಾರರ ಪಟ್ಟಿಗಳನ್ನು ಜಿಲ್ಲಾಧಿಕಾರಿಗಳ ಕಛೇರಿ , ಮತದಾರರ ನೋಂದಣಾಧಿಕಾರಿಗಳ ಕಛೇರಿ , ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಛೇರಿ ಹಾಗೂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮತಗಟ್ಟೆಗಳಲ್ಲಿ ಸಾರ್ವಜನಿಕರ ತಿಳುವಳಿಕೆಗಾಗಿ ಪ್ರಕಟಪಡಿಸಲಾಗಿದೆ. ಉಳಿದ ಮೂರು ವಿಧಾನಸಭಾ ಕ್ಷೇತ್ರಗಳಾದ 162 - ಶಿವಾಜಿನಗರ , 169 - ಚಿಕ್ಕಪೇಟೆ ಹಾಗೂ 174 - ಮಹಾದೇವಪುರ ವಿಧಾನ ಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ -2023 ರನ್ನು ದಿನಾಂಕ 15/01/2023 ರಂದು ಪ್ರಕಟಿಸಲಾಗುವುದು. ಎಂದು ತಿಳಿದು ಬಂದಿದೆ!

ಮತದಾರರ ಸೇರ್ಪಡೆ, ತಿದ್ದುಪಡಿ ಹಾಗೂ ತೆಗೆದುಹಾಕುವಿಕೆ.

 ಮತದಾರರ ಪಟ್ಟಿಯಲ್ಲಿ ನೋಂದಣಿ ಆದ ಮತದಾರರ ವಿವರಗಳು / ನಮೂದುಗಳು ತಪ್ಪಾಗಿದ್ದಲ್ಲಿ ಅವುಗಳನ್ನು ನಮೂನೆ 8 ನ್ನು ಸಲ್ಲಿಸುವ ಮೂಲಕ ತಿದ್ದುಪಡಿ ಮೂಲಕ ಸರಿಪಡಿಸಿಕೊಳ್ಳುವುದು. ವಾರ್ಷಿಕ ಮತದಾರರ ಪಟ್ಟಿ ಪರಿಷ್ಕರಣೆ ಸಮಯದಲ್ಲಿ ಈ ಮೊದಲು ವರ್ಷದ ಜನವರಿ 1 ನೇ ತಾರೀಖಿನೊಳಗೆ 18 ವರ್ಷಗಳನ್ನು ಪೂರ್ಣಗೊಳಿಸಿದವರು ಮಾತ್ರ ತಮ್ಮನ್ನು ನೋಂದಾಯಿಸಿಕೊಳ್ಳಬಹುದಾಗಿತ್ತು. ಆದರೆ ಈಗ 17 ವರ್ಷದಾಟಿದ ಯುವಕರು ಮತದಾರರಾಗಲು ಒಂದು ವರ್ಷ ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು. ಒಂದು ವರ್ಷದಲ್ಲಿ ನಾಲ್ಕು ಅರ್ಹತಾ ದಿನಾಂಕಗಳು ಇರುತ್ತವೆ. ಅವುಗಳೆಂದರೆ 1 ನೇ ಜನವರಿ , 1 ನೇ ಏಪ್ರಿಲ್ , 1 ನೇ ಜುಲೈ ಮತ್ತು 1 ನೇ ಅಕ್ಟೋಬರ್ , ಇದುವರೆಗೆ 17 ವರ್ಷ ಮೇಲ್ಪಟ್ಟ ಯುವ ಅರ್ಜಿದಾರರು 1 ನೇ ಏಪ್ರಿಲ್ 2023 ಅರ್ಹತಾ ದಿನಾಂಕಕ್ಕೆ ಸೇರ್ಪಡೆಗೊಳಿಸಲು ಸಲ್ಲಿಸಿರುವ ಒಟ್ಟು ಅರ್ಜಿಗಳ ಸಂಖ್ಯೆ 25,299 ಆಗಿರುತ್ತದೆ. ನಾಲ್ಕು ಅರ್ಹತಾದಿನಾಂಕಗಳು ಅಸ್ತಿತ್ವದಲ್ಲಿ ಬಂದ ನಂತರ , ಅರ್ಹತಾ ದಿನಾಂಕಗಳಂದು 18 ವರ್ಷಗಳನ್ನು ಪೂರ್ಣಗೊಳಿಸುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಕುರಿತು ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ 👉 Click here

 👇👇👇👇👇👇

Click here

ಸೋಮವಾರ, ಜನವರಿ 2, 2023

ಇಂದಿನ ಭವಿಷ್ಯ 03/01/2023(ಮಂಗಳವಾರ) ಇಂದಿನ ಪಂಚಾಂಗ

ಇಂದಿನ ಭವಿಷ್ಯ 03/01/2023(ಮಂಗಳವಾರ) ಇಂದಿನ ಪಂಚಾಂಗ 

ಇಂದಿನ ಪಂಚಾಂಗ

ಶ್ರೀ ಮನೃಪ ಶಾಲಿವಾಹನ ಶಕೆ 1944

ಸಂವತ್ಸರ:-  ಶುಭಕೃತನಾಮ ಸಂವತ್ಸರ, 

ಅಯನ:-  ದಕ್ಷಿಣಾಯನ

ಮಾಸ:- ಪುಷ್ಯ ಮಾಸ, 

ಋತು:- ಹೇಮಂತ ಋತು, 

ಪಕ್ಷ:-  ಶುಕ್ಲ ಪಕ್ಷ,

ತಿಥಿ:-  ದ್ವಾದಶಿ ತಿಥಿ,

ನಕ್ಷತ್ರ:-  ಕೃತಿಕಾ ನಕ್ಷತ್ರ 

ವಾರ:- ಮಂಗಳವಾರ,

ದಿನಾಂಕ: 03/01/2023

ಸೂರ್ಯೋದಯ:-  ಬೆಳಿಗ್ಗೆ 6:49

ಸೂರ್ಯಾಸ್ತ: ಸಂಜೆ 5:58

ಇಂದಿನ ಭವಿಷ್ಯ

03/01/2023(ಮಂಗಳವಾರ)

ಮೇಷ: 

ಪ್ರಣಯ ಸಂಬಂಧಗಳಿಗೆ ಇದು ಆಹ್ಲಾದಕರ ತಿಂಗಳು. ಕೆಲವರು ಕೆಲವು ಸಂಬಂಧಗಳಿಗೆ ಅಂತ್ಯ ಹಾಡುವ ಸಾಧ್ಯತೆಯಿದೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ಅನಗತ್ಯ ವಿಶ್ಲೇಷಣೆ ಮತ್ತು ಊಹಾಪೋಹಗಳಿಂದ ದೂರವಿರಿ. ಶುಭ ಸಂಖ್ಯೆ: 6

ವೃಷಭ: 

ವ್ಯಾಪಾರಿಗಳು ಅಥವಾ ಸಂಬಳ ಪಡೆಯುವ ಜನರು ಹಲವಾರು ಅಧಿಕೃತ ಪ್ರಯಾಣಗಳನ್ನು ಕೈಗೊಳ್ಳಬೇಕಾಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಸ್ಥಳ ಬದಲಾವಣೆ ಅಥವಾ ಉದ್ಯೋಗ ವರ್ಗಾವಣೆ ಸಾಧ್ಯ. ನಿಮ್ಮ ಕೌಟುಂಬಿಕ ಮತ್ತು ವೈವಾಹಿಕ ಜೀವನವು ಆಹ್ಲಾದಕರವಾಗಿರುತ್ತದೆ. ಶುಭ ಸಂಖ್ಯೆ: 9

ಮಿಥುನ: 

ನಿಮ್ಮ ಹಿರಿಯ ಅಧಿಕಾರಿಗಳೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಂಡರೆ ನೀವು ಉತ್ತಮವಾಗಿ ಕಾರ್ಯನಿರ್ವಹಿಸುವಿರಿ. ನಿಮ್ಮ ಹಣ-ಸಂಬಂಧಿತ ಸಮಸ್ಯೆಗಳು ಪರಿಹರಿಸಲ್ಪಡುತ್ತವೆ ಮತ್ತು ಹೊಸ ಆದಾಯದ ಮೂಲಗಳು ಗೋಚರಿಸುತ್ತವೆ. ಶುಭ ಸಂಖ್ಯೆ: 1

ಕಟಕ: 

ಆರೋಗ್ಯದ ದೃಷ್ಟಿಯಿಂದ ವಿಷಯಗಳು ಉತ್ತಮವಾಗಿರುತ್ತವೆ ಆದರೆ ನಿಮಗೆ ಬಿಪಿ ಸಮಸ್ಯೆಗಳು ಅಥವಾ ಸ್ನಾಯುವಿನ ಸಮಸ್ಯೆಇದ್ದರೆ, ನೀವು ಎಚ್ಚರಿಕೆಯಿಂದ ಇರಬೇಕು. ನಿಮ್ಮ ಪ್ರಣಯ ವ್ಯವಹಾರಗಳಲ್ಲಿ ಏರಿಳಿತ ಇರುತ್ತದೆ. ನಿಮ್ಮ ಅತಿಯಾದ ಕೋಪ ನಿಮ್ಮ ಸಂಬಂಧಗಳಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ಶುಭ ಸಂಖ್ಯೆ: 5

ಸಿಂಹ: 

ವ್ಯಾಪಾರಿಗಳು ಈ ತಿಂಗಳು ಸರಾಸರಿ ಲಾಭ ಗಳಿಸುವ ಸಾಧ್ಯತೆಯಿದೆ ಆದರೆ ಕಳೆದ ಕೆಲವು ದಿನಗಳು ವ್ಯಾಪಾರ ವಿಸ್ತರಣೆಯ ಕೆಲವು ಅತ್ಯುತ್ತಮ ಮತ್ತು ಹಠಾತ್ ಅವಕಾಶಗಳನ್ನು ತರುತ್ತವೆ. ನೀವು ಹೊಸ ಯೋಜನೆಯನ್ನು ಸೇರಿಸಿಕೊಳ್ಳಬಹುದು. ಶುಭ ಸಂಖ್ಯೆ: 2

ಕನ್ಯಾ: 

ಆಹಾರ ಪದ್ಧತಿ ನಿಮಗೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು ಎಂಬ ಕಾರಣಕ್ಕೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನೀವು ವಾಹನವನ್ನು ಖರೀದಿಸಬಹುದು. ಅನಿರೀಕ್ಷಿತ ವಿತ್ತೀಯ ಲಾಭವು ನಿಮ್ಮ ಹಣಕಾಸಿನ ಸ್ಥಿತಿಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಶುಭ ಸಂಖ್ಯೆ: 7

ತುಲಾ: 

ಈ ತಿಂಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಈ ತಿಂಗಳು ವಿದ್ಯಾರ್ಥಿಗಳು ಕೆಲವು ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ಶುಭ ಸಮಾರಂಭದಲ್ಲಿ ಭಾಗವಹಿಸಬಹುದು. ಶುಭ ಸಂಖ್ಯೆ: 4

ವೃಶ್ಚಿಕ: 

ನಿಮ್ಮ ಪ್ರಭಾವವು ಕೆಲಸದ ಸ್ಥಳದಲ್ಲಿ ಅನೇಕ ಪಟ್ಟು ಹೆಚ್ಚಾಗುತ್ತದೆ. ನಿಮ್ಮಲ್ಲಿ ಕೆಲವರು ನಿಮ್ಮ ನಿವಾಸ ಅಥವಾ ಕಚೇರಿಯನ್ನು ಬದಲಾಯಿಸುವ ಸಾಧ್ಯತೆಯಿದೆ. ನಿಮ್ಮ ಸಲಹೆಗಾರರ ಆಲೋಚನೆಗಳನ್ನು ನೀವು ಕಾರ್ಯಗತಗೊಳಿಸುತ್ತೀರಿ. ಶುಭ ಸಂಖ್ಯೆ: 2

ಧನು: 

ಜನರು ಮೊದಲ ವಾರ ಮುಗಿದ ಕೂಡಲೇ ತಮ್ಮ ಪ್ರಯತ್ನಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಕೆಲಸಕ್ಕೆ ಸಂಬಂಧಿಸಿದ ಗೊಂದಲ ಮತ್ತು ಅವ್ಯವಸ್ಥೆಯಿಂದ ನಿಮಗೆ ಪರಿಹಾರ ಸಿಗುತ್ತದೆ. ಶುಭ ಸಂಖ್ಯೆ: 8

ಮಕರ: 

ಮಗುವಿನ ಜೊತೆಗಿನ ಒಡನಾಟದ ಆನಂದವನ್ನು ನೀವು ಆನಂದಿಸುವಿರಿ. ನಿಮ್ಮ ಸಹೋದರರು ಅಥವಾ ಆಪ್ತರೊಂದಿಗೆ ಭಿನ್ನಾಭಿಪ್ರಾಯ ಸಾಧ್ಯ. ನೀವು ಪ್ರಯತ್ನಿಸಿದರೆ, ನಿಮ್ಮ ಕೋಪ ಮತ್ತು ಆಲಸ್ಯವನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗುತ್ತದೆ. ಶುಭ ಸಂಖ್ಯೆ: 1

ಕುಂಭ: 

ಪ್ರತಿಯೊಂದು ಪ್ರಯತ್ನದಲ್ಲೂ ಯಶಸ್ವಿಯಾಗುತ್ತೀರಿ. ನಿಮ್ಮಲ್ಲಿ ಕೆಲವರು ವಿರುದ್ಧ ಲಿಂಗದ ವ್ಯಕ್ತಿಯತ್ತ ಆಕರ್ಷಿತರಾಗಬಹುದು. ಅನಗತ್ಯ ಒತ್ತಡವು ನಿಮಗೆ ದೈಹಿಕ ಅಸ್ವಸ್ಥತೆಯನ್ನು ನೀಡುತ್ತದೆ ಆದ್ದರಿಂದ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ಶುಭ ಸಂಖ್ಯೆ: 3

ಮೀನ: 

ನೀವು ಕುಟುಂಬ ಸೌಕರ್ಯದ ಆನಂದವನ್ನು ಮತ್ತು ಸುರಕ್ಷಿತ ಯಶಸ್ಸನ್ನು ಅನುಭವಿಸುವಿರಿ. ಕೆಲವರು ಸಾಲದಿಂದ ಮುಕ್ತರಾಗುವ ಸಾಧ್ಯತೆಯಿದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಸಾಮರಸ್ಯದ ಸಂಬಂಧವನ್ನು ಹೊಂದುವಿರಿ. ಶುಭ ಸಂಖ್ಯೆ: 7. 

🙏ಇಂದು ಎಲ್ಲರಿಗೂ ಶುಭವಾಗಲಿ 🙏

🙏 ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು 🙏

ಭಾನುವಾರ, ಜನವರಿ 1, 2023

ಇಂದಿನ ಭವಿಷ್ಯ 02/01/2023(ಸೋಮವಾರ) ಇಂದಿನ ಪಂಚಾಂಗ

        ಇಂದಿನ ಭವಿಷ್ಯ 02/01/2023(ಸೋಮವಾರ) ಇಂದಿನ ಪಂಚಾಂಗ 

ಇಂದಿನ ಪಂಚಾಂಗ

ಶ್ರೀ ಮನೃಪ ಶಾಲಿವಾಹನ ಶಕೆ 1944

ಸಂವತ್ಸರ:-  ಶುಭಕೃತನಾಮ ಸಂವತ್ಸರ, 

ಅಯನ:-  ದಕ್ಷಿಣಾಯನ

ಮಾಸ:- ಪುಷ್ಯ ಮಾಸ, 

ಋತು:- ಹೇಮಂತ ಋತು, 

ಪಕ್ಷ:-  ಶುಕ್ಲ ಪಕ್ಷ,

ತಿಥಿ:-  ಏಕಾದಶಿ ತಿಥಿ,

ನಕ್ಷತ್ರ:-  ಭರಣಿ ನಕ್ಷತ್ರ 

ವಾರ:- ಸೋಮವಾರ,

ದಿನಾಂಕ: 02/01/2023

ಸೂರ್ಯೋದಯ:-  ಬೆಳಿಗ್ಗೆ 6:49

ಸೂರ್ಯಾಸ್ತ: ಸಂಜೆ 5:58

ಇಂದಿನ ಭವಿಷ್ಯ

02/01/2023(ಸೋಮವಾರ)

ಮೇಷ: 

ಅಧಿಕಾರಿಗಳ ಭಾಂದವ್ಯ ಸುಗಮ, ನಿಮ್ಮ ಹಿರಿಯ ಅಧಿಕಾರಿಗಳೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಂಡರೆ ನೀವು ಉತ್ತಮವಾಗಿ ಕಾರ್ಯನಿರ್ವಹಿಸುವಿರಿ. ನಿಮ್ಮ ಹಣ-ಸಂಬಂಧಿತ ಸಮಸ್ಯೆಗಳು ಪರಿಹರಿಸಲ್ಪಡುತ್ತವೆ ಮತ್ತು ಹೊಸ ಆದಾಯದ ಮೂಲಗಳು ಗೋಚರಿಸುತ್ತವೆ. ಶುಭ ಸಂಖ್ಯೆ: 6

ವೃಷಭ: 

ಅದೃಷ್ಟದ ಸಕಾರಾತ್ಮಕತೆಯ ಶಕ್ತಿಯನ್ನು ಆನಂದಿಸುತ್ತಾರೆ. ನಿಮ್ಮ ಬಾಕಿ ಇರುವ ಕಾರ್ಯಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ. ಕೆಲಸದ ಸ್ಥಳದಲ್ಲಿ ಕೆಲವು ಗೊಂದಲಮಯ ಮತ್ತು ಸಂದಿಗ್ಧ ಪರಿಸ್ಥಿತಿಗಳು ಕಂಡುಬರುತ್ತವೆ. ಶುಭ ಸಂಖ್ಯೆ: 9

ಮಿಥುನ: 

ಆರೋಗ್ಯದ ದೃಷ್ಟಿಯಿಂದ ವಿಷಯಗಳು ಉತ್ತಮವಾಗಿರುತ್ತವೆ ಆದರೆ ನಿಮಗೆ ಬಿಪಿ ಸಮಸ್ಯೆಗಳು ಅಥವಾ ಸ್ನಾಯುವಿನ ಸಮಸ್ಯೆಇದ್ದರೆ, ನೀವು ಎಚ್ಚರಿಕೆಯಿಂದ ಇರಬೇಕು. ನಿಮ್ಮ ಪ್ರಣಯ ವ್ಯವಹಾರಗಳಲ್ಲಿ ಏರಿಳಿತ ಇರುತ್ತದೆ. ನಿಮ್ಮ ಅತಿಯಾದ ಕೋಪ ನಿಮ್ಮ ಸಂಬಂಧಗಳಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ಶುಭ ಸಂಖ್ಯೆ: 2

ಕಟಕ: 

ವ್ಯಾಪಾರಿಗಳು ಈ ದಿನ ಸರಾಸರಿ ಲಾಭ ಗಳಿಸುವ ಸಾಧ್ಯತೆಯಿದೆ. ಆದರೆ ಕಳೆದ ಕೆಲವು ದಿನಗಳು ವ್ಯಾಪಾರ ವಿಸ್ತರಣೆಯ ಕೆಲವು ಅತ್ಯುತ್ತಮ ಮತ್ತು ಹಠಾತ್ ಅವಕಾಶಗಳನ್ನು ತರುತ್ತವೆ. ನೀವು ಹೊಸ ಯೋಜನೆಯನ್ನು ಸೇರಿಸಿಕೊಳ್ಳಬಹುದು. ಶುಭ ಸಂಖ್ಯೆ: 4

ಸಿಂಹ: 

ನಿಮ್ಮ ಎಲ್ಲಾ ಆತ್ಮವಿಶ್ವಾಸ ಮತ್ತು ಸಾಮರ್ಥ್ಯಗಳೊಂದಿಗೆ ನೀವು ಕೆಲಸದ ಸ್ಥಳದಲ್ಲಿ ಸಕ್ರಿಯರಾಗಿರುತ್ತೀರಿ. ದಿನದ ಮಧ್ಯಭಾಗ ಮುಗಿದ ನಂತರ ನೀವು ಕಠಿಣ ಪರಿಶ್ರಮ ವಹಿಸಬೇಕಾಗಬಹುದು ಮತ್ತು ಇದರ ಜೊತೆಗೆ ಕೆಲವು ಸಮಸ್ಯೆಗಳು ಉಂಟಾಗುತ್ತವೆ. ಶುಭ ಸಂಖ್ಯೆ: 5

ಕನ್ಯಾ: 

ಅನಿಯಮಿತ ಆಹಾರ ಪದ್ಧತಿ ನಿಮಗೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು ಎಂಬ ಕಾರಣಕ್ಕೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನೀವು ವಾಹನವನ್ನು ಖರೀದಿಸಬಹುದು. ಅನಿರೀಕ್ಷಿತ ವಿತ್ತೀಯ ಲಾಭವು ನಿಮ್ಮ ಹಣಕಾಸಿನ ಸ್ಥಿತಿಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಶುಭ ಸಂಖ್ಯೆ: 8

ತುಲಾ: 

ಪ್ರೀತಿಯಲ್ಲಿರುವವರು ಈ ದಿನ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಈ ತಿಂಗಳು ವಿದ್ಯಾರ್ಥಿಗಳು ಕೆಲವು ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ಶುಭ ಸಮಾರಂಭದಲ್ಲಿ ಭಾಗವಹಿಸಬಹುದು. ಶುಭ ಸಂಖ್ಯೆ: 3

ವೃಶ್ಚಿಕ: 

ನಿಮ್ಮ ಪ್ರಭಾವವು ಕೆಲಸದ ಸ್ಥಳದಲ್ಲಿ ಅನೇಕ ಪಟ್ಟು ಹೆಚ್ಚಾಗುತ್ತದೆ. ನಿಮ್ಮಲ್ಲಿ ಕೆಲವರು ನಿಮ್ಮ ನಿವಾಸ ಅಥವಾ ಕಚೇರಿಯನ್ನು ಬದಲಾಯಿಸುವ ಸಾಧ್ಯತೆಯಿದೆ. ನಿಮ್ಮ ಸಲಹೆಗಾರರ ಆಲೋಚನೆಗಳನ್ನು ನೀವು ಕಾರ್ಯಗತಗೊಳಿಸುತ್ತೀರಿ. ಶುಭ ಸಂಖ್ಯೆ: 1

ಧನು: 

ಜನರು ಮೊದಲ ವಾರ ಮುಗಿದ ಕೂಡಲೇ ತಮ್ಮ ಪ್ರಯತ್ನಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಕೆಲಸಕ್ಕೆ ಸಂಬಂಧಿಸಿದ ಗೊಂದಲ ಮತ್ತು ಅವ್ಯವಸ್ಥೆಯಿಂದ ನಿಮಗೆ ಪರಿಹಾರ ಸಿಗುತ್ತದೆ. ಶುಭ ಸಂಖ್ಯೆ: 7

ಮಕರ: 

ಮಗುವಿನ ಜೊತೆಗಿನ ಒಡನಾಟದ ಆನಂದವನ್ನು ನೀವು ಆನಂದಿಸುವಿರಿ. ನಿಮ್ಮ ಸಹೋದರರು ಅಥವಾ ಆಪ್ತರೊಂದಿಗೆ ಭಿನ್ನಾಭಿಪ್ರಾಯ ಸಾಧ್ಯ. ನೀವು ಪ್ರಯತ್ನಿಸಿದರೆ, ನಿಮ್ಮ ಕೋಪ ಮತ್ತು ಆಲಸ್ಯವನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗುತ್ತದೆ. ಶುಭ ಸಂಖ್ಯೆ: 6

ಕುಂಭ: 

ಪ್ರತಿಯೊಂದು ಪ್ರಯತ್ನದಲ್ಲೂ ಯಶಸ್ವಿಯಾಗುತ್ತೀರಿ. ಅನಗತ್ಯ ಒತ್ತಡವು ನಿಮಗೆ ದೈಹಿಕ ಅಸ್ವಸ್ಥತೆಯನ್ನು ನೀಡುತ್ತದೆ ಆದ್ದರಿಂದ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ಸಣ್ಣ ಸಣ್ಣ ಕಲಹಗಳು ಬರಬಹುದು. ಶುಭ ಸಂಖ್ಯೆ: 4

ಮೀನ: 

ನಿಮ್ಮ ಒಡಹುಟ್ಟಿದವರ ಸಹಾಯದಿಂದಾಗಿ ನೀವು ಕುಟುಂಬ ಸೌಕರ್ಯದ ಆನಂದವನ್ನು ಮತ್ತು ಸುರಕ್ಷಿತ ಯಶಸ್ಸನ್ನು ಅನುಭವಿಸುವಿರಿ. ಕೆಲವರು ಸಾಲದಿಂದ ಮುಕ್ತರಾಗುವ ಸಾಧ್ಯತೆಯಿದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಸಾಮರಸ್ಯದ ಸಂಬಂಧವನ್ನು ಕಾಪಾಡಿಕೊಳ್ಳುತ್ತೀರಿ. ಶುಭ ಸಂಖ್ಯೆ: 7