224 ವಿಧಾನ ಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿ ಕುರಿತು!
ಭಾರತ ಚುನಾವಣಾ ಆಯೋಗದ ನಿರ್ದೇಶನಗಳನ್ವಯ ಕರ್ನಾಟಕ ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ ಕಾರ್ಯಕ್ರಮ ಅರ್ಹತಾ ದಿನಾಂಕ : 01/01/2023 ರಂತೆ ಮತದಾರರ ಪಟ್ಟಿಯ ಪರಿಷ್ಕರಣೆಯ ಕುರಿತು ದಿನಾಂಕ : 05/01/2023ರ ಈ ದಿನ 221 ವಿಧಾನಸಭಾ ಕ್ಷೇತ್ರಗಳಲ್ಲಿ ಅಂತಿಮ ಮತದಾರರ ಪಟ್ಟಿಗಳನ್ನು ಜಿಲ್ಲಾಧಿಕಾರಿಗಳ ಕಛೇರಿ , ಮತದಾರರ ನೋಂದಣಾಧಿಕಾರಿಗಳ ಕಛೇರಿ , ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಛೇರಿ ಹಾಗೂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮತಗಟ್ಟೆಗಳಲ್ಲಿ ಸಾರ್ವಜನಿಕರ ತಿಳುವಳಿಕೆಗಾಗಿ ಪ್ರಕಟಪಡಿಸಲಾಗಿದೆ. ಉಳಿದ ಮೂರು ವಿಧಾನಸಭಾ ಕ್ಷೇತ್ರಗಳಾದ 162 - ಶಿವಾಜಿನಗರ , 169 - ಚಿಕ್ಕಪೇಟೆ ಹಾಗೂ 174 - ಮಹಾದೇವಪುರ ವಿಧಾನ ಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ -2023 ರನ್ನು ದಿನಾಂಕ 15/01/2023 ರಂದು ಪ್ರಕಟಿಸಲಾಗುವುದು. ಎಂದು ತಿಳಿದು ಬಂದಿದೆ!
ಮತದಾರರ ಸೇರ್ಪಡೆ, ತಿದ್ದುಪಡಿ ಹಾಗೂ ತೆಗೆದುಹಾಕುವಿಕೆ.
ಮತದಾರರ ಪಟ್ಟಿಯಲ್ಲಿ ನೋಂದಣಿ ಆದ ಮತದಾರರ ವಿವರಗಳು / ನಮೂದುಗಳು ತಪ್ಪಾಗಿದ್ದಲ್ಲಿ ಅವುಗಳನ್ನು ನಮೂನೆ 8 ನ್ನು ಸಲ್ಲಿಸುವ ಮೂಲಕ ತಿದ್ದುಪಡಿ ಮೂಲಕ ಸರಿಪಡಿಸಿಕೊಳ್ಳುವುದು. ವಾರ್ಷಿಕ ಮತದಾರರ ಪಟ್ಟಿ ಪರಿಷ್ಕರಣೆ ಸಮಯದಲ್ಲಿ ಈ ಮೊದಲು ವರ್ಷದ ಜನವರಿ 1 ನೇ ತಾರೀಖಿನೊಳಗೆ 18 ವರ್ಷಗಳನ್ನು ಪೂರ್ಣಗೊಳಿಸಿದವರು ಮಾತ್ರ ತಮ್ಮನ್ನು ನೋಂದಾಯಿಸಿಕೊಳ್ಳಬಹುದಾಗಿತ್ತು. ಆದರೆ ಈಗ 17 ವರ್ಷದಾಟಿದ ಯುವಕರು ಮತದಾರರಾಗಲು ಒಂದು ವರ್ಷ ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು. ಒಂದು ವರ್ಷದಲ್ಲಿ ನಾಲ್ಕು ಅರ್ಹತಾ ದಿನಾಂಕಗಳು ಇರುತ್ತವೆ. ಅವುಗಳೆಂದರೆ 1 ನೇ ಜನವರಿ , 1 ನೇ ಏಪ್ರಿಲ್ , 1 ನೇ ಜುಲೈ ಮತ್ತು 1 ನೇ ಅಕ್ಟೋಬರ್ , ಇದುವರೆಗೆ 17 ವರ್ಷ ಮೇಲ್ಪಟ್ಟ ಯುವ ಅರ್ಜಿದಾರರು 1 ನೇ ಏಪ್ರಿಲ್ 2023 ಅರ್ಹತಾ ದಿನಾಂಕಕ್ಕೆ ಸೇರ್ಪಡೆಗೊಳಿಸಲು ಸಲ್ಲಿಸಿರುವ ಒಟ್ಟು ಅರ್ಜಿಗಳ ಸಂಖ್ಯೆ 25,299 ಆಗಿರುತ್ತದೆ. ನಾಲ್ಕು ಅರ್ಹತಾದಿನಾಂಕಗಳು ಅಸ್ತಿತ್ವದಲ್ಲಿ ಬಂದ ನಂತರ , ಅರ್ಹತಾ ದಿನಾಂಕಗಳಂದು 18 ವರ್ಷಗಳನ್ನು ಪೂರ್ಣಗೊಳಿಸುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಕುರಿತು ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲಾಗುವುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ