ಇಲಾಖಾ ಪರೀಕ್ಷೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ!
2021 ರ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ : ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 12/01/2023 II. 31/01/2023
ಅರ್ಜಿ ಸಲ್ಲಿಸುವ ವಿಧಾನ :
ಇಲಾಖಾ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕರ್ನಾಟಕ ಲೋಕಸೇವಾ ಆಯೋಗದ ( KPSC ) ವೆಬ್‌ಸೈಟ್ http://www.kpsc.kar.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವ ವಿಧಾನಕ್ಕಾಗಿ ಅನುಬಂಧ -1 ರಲ್ಲಿನ ಮಾಹಿತಿಯನ್ನು ನಮೂದಿಸಲಾಗಿದೆ .
ಅರ್ಹತೆ :
I. ಈ ಕೆಳಕಂಡ ನೌಕರರು ಇಲಾಖಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ .
ಅ ) ಸರ್ಕಾರಿ ನೌಕರರು .
ಆ ) ಸರ್ಕಾರಿ ಸ್ವಾಮ್ಯಕ್ಕೊಳಪಟ್ಟ ನಿಗಮ / ಮಂಡಳಿ / ಸ್ಥಳೀಯ ಸಂಸ್ಥೆಗಳು / ವಿಶ್ವವಿದ್ಯಾಲಯಗಳ / ಪ್ರಾಧಿಕಾರಗಳ ಖಾಯಂ ನೌಕರರು , ಗ್ರೂಪ್ - ' ಡಿ ' ನೌಕರರು ಇಲಾಖಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
ಅಭ್ಯರ್ಥಿಗಳಿಗೆ ವಿಶೇಷ ಸೂಚನೆಗಳು :
ಅ ) ಇಲಾಖಾ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಸಂಬಂಧ ಅಭ್ಯರ್ಥಿಗಳು ಅನುಬಂಧ -2 ರಲ್ಲಿನ ಸೂಚನೆಗಳನ್ನು ಓದಿಕೊಳ್ಳತಕ್ಕದ್ದು.
ಆ ) ಸಬಾರ್ಡಿನೇಟ್ ಅಕೌಂಟ್ಸ್ ಸರ್ವೀಸಸ್ ( ಎಸ್.ಎ.ಎಸ್ . ) ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಅಭ್ಯರ್ಥಿಗಳು ಅನುಬಂಧ -3 ರಲ್ಲಿನ ವಿಶೇಷವಾದ ಸೂಚನೆಗಳನ್ನು ನಮೂದಿಸಲಾಗಿದೆ.
ಇ ) ಇಲಾಖಾ ಪರೀಕ್ಷೆಗಳನ್ನು ಆಪ್ ಲೈನ್ ಓಎಂಆರ್ ಮಾದರಿ ( Offline / OMR type ) ಅಥವಾ ಗಣಕ ಯಂತ್ರದ ಮೂಲಕ ( Computer Based Test - CBT ) ಮುಖಾಂತರ ನಡೆಸಲಾಗುವುದು.ಈ ವಿಷಯದಲ್ಲಿ ಆಯೋಗದ ತೀರ್ಮಾನವೇ ಅಂತಿಮವಾಗಿರುತ್ತದೆ
ಈ ) ಆನ್ ಲೈನ್ ಅರ್ಜಿ ಸಲ್ಲಿಸುವಾಗ ಸ್ಪಷ್ಟವಾದ ಇತ್ತೀಚಿನ ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡತಕ್ಕದ್ದು . ಇಲ್ಲವಾದಲ್ಲಿ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಉ ) ಸಕ್ರಿಯವಾಗಿರುವ ಇ - ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಅರ್ಜಿಯಲ್ಲಿ ನಮೂದಿಸತಕ್ಕದ್ದು ಹಾಗೂ ಪರೀಕ್ಷಾ ಪ್ರಕ್ರಿಯೆ ಮುಕಾಯಗೊಳ್ಳುವವರೆಗೂ ಇರತಕ್ಕದ್ದು.
ವಿಷಯ ಸಂಕೇತಗಳು ಮತ್ತು ಪ್ರತಿ ವಿಷಯಕ್ಕೆ ನಿಗದಿಪಡಿಸಿದ ಶುಲ್ಕದ ವಿವರಗಳು :
ಇಲಾಖಾ ಪರೀಕ್ಷೆಯ ವಿವಿಧ ವಿಷಯಗಳು , ಅವುಗಳ ಸಂಕೇತಗಳು ಹಾಗೂ ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 6 ಸೇಲೋಸೇ 2010 , ದಿನಾಂಕ : 06/08/2010 ರನ್ವಯ ನಿಗದಿಪಡಿಸಿರುವ ಶುಲ್ಕಗಳ ವಿವರಗಳನ್ನು ಅನುಬಂಧ -4 ರಲ್ಲಿ ನಮೂದಿಸಲಾಗಿದೆ.
ಪರೀಕ್ಷಾ ಕೇಂದ್ರಗಳು :
ಇಲಾಖಾ ಪರೀಕ್ಷೆಗಳನ್ನು ಒಟ್ಟು 02 ಹಂತಗಳಲ್ಲಿ ನಡೆಸಲು ಉದ್ದೇಶಿಸಲಾಗಿದ್ದು , ಪ್ರಥಮ ಹಂತದಲ್ಲಿ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ , ದ್ವಿತೀಯ ಹಂತದಲ್ಲಿ ಬೆಂಗಳೂರು ಜಿಲ್ಲಾ ಕೇಂದ್ರದಲ್ಲಿ ಮಾತ್ರ ನಡೆಸಲಾಗುವುದು . ಆದಾಗ್ಯೂ ಪರೀಕ್ಷಾ ಕೇಂದ್ರಗಳ ನಿಗದಿಪಡಿಸುವಿಕೆಯು ಆಯೋಗದ ತೀರ್ಮಾನಕ್ಕೊಳಪಟ್ಟಿರುತ್ತದೆ . ಸದರಿ ಮಾಹಿತಿಯನ್ನು ಅನುಬಂಧ -5 ರಲ್ಲಿ ನಮೂದಿಸಲಾಗಿದೆ.
ಪಠ್ಯ ಕ್ರಮ :
ಇಲಾಖಾ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ವಸ್ತುನಿಷ್ಠ ಬಹು ಆಯ್ಕೆ ಮಾದರಿಯ ಒಟ್ಟು 99 ಪತ್ರಿಕೆಗಳಿಗೆ ಹಾಗೂ ವಿವರಣಾತ್ಮಕ ಮಾದರಿಯ ಒಟ್ಟು 19 ಪತ್ರಿಕೆಗಳಿಗೆ ಪರೀಕ್ಷೆ ನಡೆಸಲಾಗುತ್ತಿದ್ದು , ಮಾಹಿತಿಯನ್ನು ಅನುಬಂಧ -6 ರಲ್ಲಿ ನಮೂದಿಸಲಾಗಿದೆ.
ಪರೀಕ್ಷಾ ವೇಳಾಪಟ್ಟಿ :
2021 ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ಒಟ್ಟು 02 ಹಂತಗಳಲ್ಲಿ ನಡೆಸಲು ಉದ್ದೇಶಿಸಿದ್ದು , ಸದರಿ ಪರೀಕ್ಷೆಗಳ ವೇಳಾಪಟ್ಟಿಯನ್ನು ನಂತರದಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಲಾಗುತ್ತದೆ . ವಿನಾಯಿತಿ : ನಿಯಮಾನುಸಾರ ಹಿಂದಿನ ಎರಡು ವರ್ಷಗಳ ಅವಧಿಯಲ್ಲಿ ಇಲಾಖಾ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳ ಆಧಾರದ ಮೇರೆಗೆ ಹಾಗೂ ಅಭ್ಯರ್ಥಿಗಳು ಹೊಂದಿರುವ ಶೈಕ್ಷಣಿಕ ವಿದ್ಯಾರ್ಹತೆ ಮೇರೆಗೆ ಕೆಲವು ವಿಷಯಗಳಿಗೆ / ಪತ್ರಿಕೆಗಳಿಗೆ ವಿನಾಯಿತಿಯನ್ನು ನೀಡಲು ಅವಕಾಶವಿದೆ.
ಅಂಧ / ಅಂಗವಿಕಲ ಅಭ್ಯರ್ಥಿಗಳ ಕುರಿತು :
ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 272 ಸನಿನಿ 2013 , ದಿನಾಂಕ : 11/02/2021 ರಂತೆ ಅಂಗವಿಕಲ ನಿಯಮಗಳನ್ವಯ ಪರೀಕ್ಷೆ ಬರೆಯಲು ದೈಹಿಕ ಅಸಮರ್ಥತೆ ಹೊಂದಿರುವ ಅಭ್ಯರ್ಥಿಗಳಿಗೆ ಆಯೋಗವು ಇಲಾಖಾ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ . ಅಂಧ / ದೈಹಿಕ ಅಸಮರ್ಥತೆಯುಳ್ಳ ಅಭ್ಯರ್ಥಿಗಳು ಲಿಪಿಕಾರರ ಸಹಾಯದೊಂದಿಗೆ ಪರೀಕ್ಷೆಗೆ ಹಾಜರಾಗುವ ಕುರಿತಾದ ಮಾಹಿತಿಯನ್ನು ಅನುಬಂಧ -9 ರಲ್ಲಿ ನಮೂದಿಸಲಾಗಿದೆ.
ಕನ್ನಡ ಭಾಷಾ ಪರೀಕ್ಷೆ ಕುರಿತು :
ಅಖಿತ ಭಾರತ ಸೇವೆಗಳಾದ ಐ.ಎ.ಎಸ್ . , ಐ.ಪಿ.ಎಸ್ . ಮತ್ತು ಐ.ಎಫ್.ಎಸ್ . ಅಭ್ಯರ್ಥಿಗಳು ಕಡ್ಡಾಯವಾಗಿ ವಿಷಯ ಸಂಕೇತ -72 ಅನ್ನು ಆಯ್ಕೆ ಮಾಡಿಕೊಳ್ಳಬೇಕು ಹಾಗೂ ಇತರೆ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ವಿಷಯ ಸಂಕೇತ -47 ನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು . ಮಾಹಿತಿಯನ್ನು ಅನುಬಂಧ -10 ರಲ್ಲಿ ನಮೂದಿಸಲಾಗಿದೆ.
ನೂತನ / ಇತ್ತೀಚಿನ ತಿದ್ದುಪಡಿಗಳು :
ಇಲಾಖಾ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕೆಲವು ಇಲಾಖೆಗಳ ಪಠ್ಯಕ್ರಮಗಳು ಪರಿಷ್ಕೃತ / ತಿದ್ದುಪಡಿಗೊಂಡಿದ್ದು , ಮಾಹಿತಿಯನ್ನು ಅನುಬಂಧ -11 ರಲ್ಲಿ ನಮೂದಿಸಲಾಗಿದೆ.
ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುವ ವಿಧಾನ :
ಅಭ್ಯರ್ಥಿಗಳು ಇಲಾಖಾ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ವಿಧಾನವನ್ನು ಅನುಬಂಧ -12 ರಲ್ಲಿ ನಮೂದಿಸಲಾಗಿದೆ.
ಪ್ರಮಾಣಪತ್ರಗಳ ವಿತರಣೆ / ನೈಜತೆಯ ಪ್ರಮಾಣಪತ್ರಗಳ ಬಗ್ಗೆ : ಇಲಾಖಾ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಅಭ್ಯರ್ಥಿಗಳು ಮೂಲ ಪ್ರಮಾಣಪತ್ರಗಳನ್ನು ಪಡೆಯುವ ಬಗ್ಗೆ ಹಾಗೂ ಅವುಗಳ ನೈಜತೆಯ ಕುರಿತಂತೆ ಅನುಬಂಧ -13 ರಲ್ಲಿ ನಮೂದಿಸಲಾಗಿದೆ.
ಅಂಕಗಳ ಮರುಎಣಿಕೆ ಕುರಿತು :
ಇಲಾಖಾ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡ ನಂತರ ಮರು ಮೌಲ್ಯಮಾಪನಕ್ಕೆ ಅವಕಾಶವಿರುವುದಿಲ್ಲ . ಆದರೆ 19 ವಿವರಣಾತ್ಮಕ ಮಾದರಿಯ ಉತ್ತರ ಪತ್ರಿಕೆಗಳಿಗೆ ಸಂಬಂಧಿಸಿದಂತೆ ಅಂಕಗಳ ಮರು ಎಣಿಕೆಗೆ ಅವಕಾಶ ನೀಡಲಾಗಿದೆ ವಿವರಗಳನ್ನು ಅನುಬಂಧ -14 ರಲ್ಲಿ ನಮೂದಿಸಲಾಗಿದೆ.
(ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಓದಿ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ