ಪರಿಸ್ಕೃತ ವರ್ಗಾವಣೆಯ ವೇಳಾಪಟ್ಟಿ ಪ್ರಕಟ!
ಈಗಾಗಲೇ ಮಾರ್ಗಸೂಚಿ ಸಹಿತ ವರ್ಗಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಕೆಲವು ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದಾಗಿ ಹೆಚ್ಚುವರಿ ಶಿಕ್ಷಕರ ಅಂತಿಮ ಆಧ್ಯತಾ ಪಟ್ಟಿಯನ್ನು ಪ್ರಕಟಣೆಯನ್ನು ಮುಂದೂಡಲಾಗಿತ್ತು. ಪ್ರಸ್ತುತ ವರ್ಗಾವಣಾ ವೇಳಾಪಟ್ಟಿಯನ್ನು ಕೆಳಕಂಡಂತೆ ಪರಿಷ್ಕರಿಸಿದೆ . ಉಳಿದಂತೆ ದಿನಾಂಕ : 26 / 12 / 2022 ರಂದು ಹೊರಡಿಸಲಾದ ವರ್ಗಾವಣಾ ಅಧಿಸೂಚನೆಯಲ್ಲಿಯಲ್ಲಿರುವ ಎಲ್ಲಾ ಮಾರ್ಗಸೂಚಿ ಅಂಶಗಳು ಯಥಾವತ್ತಾಗಿ ಮುಂದುವರೆಯುತ್ತದೆ. ಈ ವೇಳಾಪಟ್ಟಿಯ ಜೊತೆಯಲ್ಲಿ ಸದರಿ ಮಾರ್ಗಸೂಚಿ ಅಂಶಗಳನ್ನು ಓದಿಕೊಳ್ಳತಕ್ಕದ್ದು.
ಅಭ್ಯರ್ಥಿಗಳಿಗೆ ಸೂಚನೆ :
ವರ್ಗಾವಣಾ ತಂತ್ರಾಂಶದಲ್ಲಿ ಶಿಕ್ಷಕರು ಅರ್ಜಿ ಸಲ್ಲಿಸುವಾಗ ವಿನಾಯಿತಿ / ಆಧ್ಯತೆ ಕೋರುವ ದಾಖಲೆಗಳನ್ನು ಮತ್ತು ಇತರ ಸೇವಾ ಮಾಹಿತಿಯನ್ನು ಬಹಳ ಎಚ್ಚರಿಕೆಯಿಂದ ಅಪ್‌ಲೋಡ್ ಮಾಡತಕ್ಕದ್ದು , ತಪ್ಪಾಗಿ ಅರ್ಜಿ ಸಲ್ಲಿಸಿ ನಂತರ ತಪ್ಪು ಎಂದು ಕಂಡುಬಂದ ನಂತರ ತಿದ್ದುಪಡಿಗೆ ಹಾಗೂ ಪುನರ್ ಪರಿಶೀಲಿಸಿ ಹೊಸದಾಗಿ ಅರ್ಜಿ ಸಲ್ಲಿಸಲು ಯಾವುದೇ ಕಾರಣಕ್ಕೂ ಅವಕಾಶ ಕಲ್ಪಿಸಲಾಗುವುದಿಲ್ಲ.
ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಹಾಗೂ ತತ್ಸಮಾನ ( ಗ್ರೂಪ್ - ಬಿ ) ವೃಂದದ ಅಧಿಕಾರಿಗಳು ಪತಿ ಅಥವಾ ಪತ್ನಿ ಸರ್ಕಾರಿ ನೌಕರರ ಪ್ರಕರಣದಲ್ಲಿ ನೇಮಕಾತಿ ಪ್ರಾಧಿಕಾರದಿಂದ ( ಆಯುಕ್ತರಿಂದ ) ಸೇವಾ ಪ್ರಮಾಣ ಪತ್ರ ಪಡೆಯಬೇಕು ಎಂದಿದ್ದು , ಅರ್ಜಿ ಸಲ್ಲಿಸಲು ಆಗುವ ವಿಳಂಬವನ್ನು ತಪ್ಪಿಸಲು ಅನುಕೂಲವಾಗುವಂತೆ ಆಯಾ ಜಿಲ್ಲಾ ಉಪನಿರ್ದೆಶಕರು ( ಆಡಳಿತ ) ಇವರಿಂದ ಸೇವಾ ಪ್ರಮಾಣ ಪತ್ರವನ್ನು ಪಡೆಯಲು ತಿಳಿಸಿದೆ. ಉಳಿದಂತೆ ಹೊರಡಿಸಲಾಗಿರುವ ಮಾರ್ಗಸೂಚಿ ಅಂಶಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಎಂದು ತಿಳಿದುಬಂದಿದೆ. ( ಮಾನ್ಯ ಆಯುಕ್ತರಿಂದ ಅನುಮೋದಿಸಲ್ಪಟ್ಟಿದೆ )
ಪರಿಸ್ಕೃತ ವರ್ಗಾವಣೆಯ ವೇಳಾಪಟ್ಟಿ👇👇
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ