ಪ್ರತಿ ದಿನದ ಹೊಸ ಮಾಹಿತಿಗಾಗಿ ನಮ್ಮ ಗುಂಪುಗಳಿಗೆ ಸೇರಿ Samagra Mahiti     Samagra Mahiti

ಶನಿವಾರ, ಜನವರಿ 14, 2023

NEET Long term ತರಬೇತಿಗೆ ಅರ್ಜಿ ಆಹ್ವಾನ!

 ವಸತಿಯುತ NEET Long term ತರಬೇತಿಗೆ ಅರ್ಜಿ ಆಹ್ವಾನ!

 


ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗಳ ಅಧ್ಯಯನ ಸಾಮಾಗ್ರಿ , ತರಬೇತಿ ಹಾಗೂ ಮಾರ್ಗದರ್ಶನ ಕೊರತೆಯಿಂದಾಗಿ NEET ನಂತಹ ಪ್ರವೇಶ ಪರೀಕ್ಷೆಯಲ್ಲಿ ಅರ್ಹತಾ ಅಂಕ ಗಳಿಸಲು ಸಾಧ್ಯವಾಗದೆ , ಪರಿಶಿಷ್ಠಿತ ಕೋರ್ಸುಗಳಾದ MBBS , BDS , BMS , BAMS ಮೊದಲಾದ ಕೋರ್ಸುಗಳ ಪ್ರವೇಶದಿಂದ ವಂಚಿತರಾದಂತಹ ದ್ವಿತೀಯ ಪಿ.ಯು.ಸಿ ಯಲ್ಲಿ ಉತ್ತೀರ್ಣರಾದ 2022-23 ನೇ ಸಾಲಿನ NEET ಪ್ರವೇಶ ಪರೀಕ್ಷೆಗೆ ಸಿದ್ಧತೆ ಮಾಡುಕೊಳ್ಳುತ್ತಿರುವ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಗುಣಮಟ್ಟದ ಖಾಸಗಿ NEET ತರಬೇತಿ ಸಂಸ್ಥೆಗಳ ಸಹಯೋಗದಲ್ಲಿ ವಸತಿಯುತ " Exclusive Long term ” ತರಬೇತಿ ಆಯೋಜಿಸಲು ಉದ್ದೇಶಿಸಲಾಗಿದ್ದು . ವಿವರ ಈ ಕೆಳಕಂಡಂತಿದೆ. 


ತರಬೇತಿ ಯೋಜನೆ:( Training Project ) : 

2021-22 ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ , 2022-23 ನೇ ಸಾಲಿನ NEET ಪರೀಕ್ಷೆಗಾಗಿ ಒಂದು ವರ್ಷ ಪೂರ್ಣ ಪ್ರಮಾಣದಲ್ಲಿ ತಯಾರಿ ಆಸಕ್ತರಿರುವ 200 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ಪ್ರವೇಶ ನಡೆಸಲು ಅಂತಹ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಗುಣಮಟ್ಟ ಹೊಂದಿರುವ ಖಾಸಗಿ ತರಬೇತಿ ಸಂಸ್ಥೆಗಳ ಮೂಲಕ NEET ತರಬೇತಿಯನ್ನು ಬೆಂಗಳೂರು / ಮಂಗಳೂರು ನಗರದಲ್ಲಿ ನೀಡಲಾಗುತ್ತದೆ.


ತರಬೇತಿಯ ಸ್ಥಳ:

 ಬೆಂಗಳೂರು ಅಥವಾ ಮಂಗಳೂರು ನಗರದಲ್ಲಿ ವಸತಿಯುತ NEET Long term ತರಬೇತಿ ನೀಡುವುದು 


ಅಭ್ಯರ್ಥಿಗಳು ಹೊಂದಿರಬೇಕಾದಂತಹ ಅರ್ಹತೆಗಳು : 

ಕರ್ನಾಟಕದಲ್ಲಿ ಖಾಯಂ ನಿವಾಸಿಯಾಗಿರಬೇಕು.

ಕರ್ನಾಟಕ ಸರ್ಕಾರವು ಅಧಿಸೂಚಿರುವ ಪರಿಶಿಷ್ಟ ಜಾತಿಗೆ ಸೇರಿರಬೇಕು. ಕುಟುಂಬ ವಾರ್ಷಿಕ ಆದಾಯ ರೂ .5.00 ಲಕ್ಷ ಮೀರಿರಬಾರದು. 

ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು.  

2022-23 ನೇ ಸಾಲಿನ NEET ಪ್ರವೇಶ ಪರೀಕ್ಷೆ ಬರೆಯಲು ಆಸಕ್ತರಿರಬೇಕು.

2022-23 ನೇ ಸಾಲಿನ NEET ಪ್ರವೇಶಗೆ ತಯಾರಿ ನಡೆಸುತ್ತಿರಬೇಕು.


ಅಭ್ಯರ್ಥಿಗಳ ಆಯ್ಕೆ : 

2022-23 ನೇ ಸಾಲಿನ NEET ಪ್ರವೇಶ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದವರು ಹಾಗೂ . 

JEE - mains ಪ್ರವೇಶ ಪರೀಕ್ಷೆಯಲ್ಲಿ ಅರ್ಹತಾ ಅಂಕ ಪಡೆದು 

JEE - Advance ಪ್ರವೇಶ ಪರೀಕ್ಷೆ ಬರೆಯಲು ಅರ್ಹರಾದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

ಒಂದೊಮ್ಮೆ ಮೇಲೆ ವಿವರಿಸಿರುವ ಅರ್ಹತೆ ಹೊಂದಿರುವ ವಿದ್ಯಾರ್ಥಿಗಳು ಲಭ್ಯವಿಲ್ಲದಿದ್ದರೆ , ದ್ವೀತಿಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ 85 % ಕ್ಕಿಂತ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳಿಗೆ ನಿಗದಿತ ಗುರಿಗೆ ಅನುಗುಣವಾಗಿ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.


ಅಭ್ಯರ್ಥಿಗಳ ಹಂಚಿಕೆ : 

2022-23 ನೇ ಸಾಲಿಗೆ 200 ಅಭ್ಯರ್ಥಿಗಳ ಗುರಿಯನ್ನು ನಿಗಧಿಪಡಿಸಿಕೊಳ್ಳಲಾಗಿದ್ದು , ಅದರಲ್ಲಿ ಕೆಳಕಂಡಂತೆ ಸ್ಥಾನವನ್ನು ಹಂಚಲಾಗುವುದು. 

1. ಕರ್ನಾಟಕ ವಸತಿ ಶಿಕ್ಷಣ ಸಂಘದ ಕಾಲೇಜುಗಳಲ್ಲಿ  ಅಧ್ಯಯನ ಮಾಡಿದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು 30 %

2. ಸರ್ಕಾರಿ ಹಾಸ್ಟೆಲ್ ಗಳಲ್ಲಿ ಕನಿಷ್ಠ 02 ವರ್ಷ ಅಧ್ಯಯನ ಮಾಡಿದ ಪರಿಶಿಷ್ಟ ಜಾತಿ ಅಭ್ಯರ್ಥಿಗಳು 20%  

3. ಸಾಮಾನ್ಯ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು 50 % 

ಒಂದೊಮ್ಮೆ ನಿಗದಿತ ಗುರಿಗೆ ಅನುಗುಣವಾಗಿ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ , ಇತರೆ ಅರ್ಹ ಪರಿಶಿಷ್ಟ ಜಾತಿ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದು.


ತರಬೇತಿ ಸೌಲಭ್ಯ : 

ಆಯ್ಕೆಯಾದ ಅಭ್ಯರ್ಥಿಗಳಿಗೆ ಟೆಂಡರ್ ನಲ್ಲಿ ಎಂಪಾನಲ್ ಗೊಂಡ ತರಬೇತಿ ಸಂಸ್ಥೆಗಳ ಸಹಯೋಗದಲ್ಲಿ ಭೌತಿಕವಾಗಿ ತರಬೇತಿಯನ್ನು ನೀಡಲಾಗುವುದು.

2022-23ನೇ ಸಾಲಿನ NEET ಪ್ರವೇಶ ಪರೀಕ್ಷೆ ಪ್ರಾರಂಭವಾಗುವವರೆಗೂ ಉಚಿತವಾಗಿ ಊಟ - ವಸತಿ , ತರಬೇತಿ ನೀಡಲಾಗುವುದು.

ತರಬೇತಿ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ Study Materils , Digital Materials ಗಳನ್ನು ಒದಗಿಸಲಾಗುವುದು . ಆಯ್ಕೆಯಾದ ಅಭ್ಯರ್ಥಿಗಳ ತರಬೇತಿಯನ್ನು ಬೆಂಗಳೂರು / ಮಂಗಳೂರು ನಗರದಲ್ಲಿ ಮಾತ್ರ ನೀಡಲಾಗುತ್ತದೆ.


ಅರ್ಜಿ ಸಲ್ಲಿಸುವ ವಿಧಾನ : 

ನಿಗಧಿತ ಅರ್ಜಿ ನಮೂನೆಯನ್ನು ಇಲಾಖಾ ವೆಬ್ ಸೈಟ್ ವಿಳಾಸ sw.kar.nic.in ನಲ್ಲಿ ಅಳವಡಿಸಲಾಗಿದ್ದು , ಆಸಕ್ತ ಅಭ್ಯರ್ಥಿಗಳು ಸದರಿ ಲಿಂಕ್ ಮೂಲಕ online ನಲ್ಲಿಯೇ ಅರ್ಜಿ ಸಲ್ಲಿಸಬೇಕಿದೆ. ಅರ್ಜಿಯನ್ನು ಈ ಸಲ್ಲಿಸಬೇಕಾಗಿರುತ್ತದೆ. ಕೆಳಕಂಡ ದಾಖಲೆಗಳೊಂದಿಗೆ 

ಜಾತಿ ಪ್ರಮಾಣ ಪತ್ರ 

ಆದಾಯ ಪ್ರಮಾಣ ಪತ್ರ 

ಎಸ್.ಎಸ್.ಎಲ್.ಸಿ ಅಂಕ ಪಟ್ಟಿ

ಪಿ.ಯು.ಸಿ ಅಂಕ ಪಟ್ಟಿ 


ಹೆಚ್ಚಿನ ಮಾಹಿತಿಗಾಗಿ 👇👇

ಬುಧವಾರ, ಜನವರಿ 11, 2023

ಪರಿಸ್ಕೃತ ವರ್ಗಾವಣೆಯ ವೇಳಾಪಟ್ಟಿ ಪ್ರಕಟ!

 ಪರಿಸ್ಕೃತ ವರ್ಗಾವಣೆಯ ವೇಳಾಪಟ್ಟಿ ಪ್ರಕಟ!


 ಈಗಾಗಲೇ ಮಾರ್ಗಸೂಚಿ ಸಹಿತ ವರ್ಗಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಕೆಲವು ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದಾಗಿ ಹೆಚ್ಚುವರಿ ಶಿಕ್ಷಕರ ಅಂತಿಮ ಆಧ್ಯತಾ ಪಟ್ಟಿಯನ್ನು ಪ್ರಕಟಣೆಯನ್ನು ಮುಂದೂಡಲಾಗಿತ್ತು. ಪ್ರಸ್ತುತ ವರ್ಗಾವಣಾ ವೇಳಾಪಟ್ಟಿಯನ್ನು ಕೆಳಕಂಡಂತೆ ಪರಿಷ್ಕರಿಸಿದೆ . ಉಳಿದಂತೆ ದಿನಾಂಕ : 26 / 12 / 2022 ರಂದು ಹೊರಡಿಸಲಾದ ವರ್ಗಾವಣಾ ಅಧಿಸೂಚನೆಯಲ್ಲಿಯಲ್ಲಿರುವ ಎಲ್ಲಾ ಮಾರ್ಗಸೂಚಿ ಅಂಶಗಳು ಯಥಾವತ್ತಾಗಿ ಮುಂದುವರೆಯುತ್ತದೆ. ಈ ವೇಳಾಪಟ್ಟಿಯ ಜೊತೆಯಲ್ಲಿ ಸದರಿ ಮಾರ್ಗಸೂಚಿ ಅಂಶಗಳನ್ನು ಓದಿಕೊಳ್ಳತಕ್ಕದ್ದು. 


ಅಭ್ಯರ್ಥಿಗಳಿಗೆ ಸೂಚನೆ : 

ವರ್ಗಾವಣಾ ತಂತ್ರಾಂಶದಲ್ಲಿ ಶಿಕ್ಷಕರು ಅರ್ಜಿ ಸಲ್ಲಿಸುವಾಗ ವಿನಾಯಿತಿ / ಆಧ್ಯತೆ ಕೋರುವ ದಾಖಲೆಗಳನ್ನು ಮತ್ತು ಇತರ ಸೇವಾ ಮಾಹಿತಿಯನ್ನು ಬಹಳ ಎಚ್ಚರಿಕೆಯಿಂದ ಅಪ್‌ಲೋಡ್ ಮಾಡತಕ್ಕದ್ದು , ತಪ್ಪಾಗಿ ಅರ್ಜಿ ಸಲ್ಲಿಸಿ ನಂತರ ತಪ್ಪು ಎಂದು ಕಂಡುಬಂದ ನಂತರ ತಿದ್ದುಪಡಿಗೆ ಹಾಗೂ ಪುನರ್ ಪರಿಶೀಲಿಸಿ ಹೊಸದಾಗಿ ಅರ್ಜಿ ಸಲ್ಲಿಸಲು ಯಾವುದೇ ಕಾರಣಕ್ಕೂ ಅವಕಾಶ ಕಲ್ಪಿಸಲಾಗುವುದಿಲ್ಲ.


ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಹಾಗೂ ತತ್ಸಮಾನ ( ಗ್ರೂಪ್ - ಬಿ ) ವೃಂದದ ಅಧಿಕಾರಿಗಳು ಪತಿ ಅಥವಾ ಪತ್ನಿ ಸರ್ಕಾರಿ ನೌಕರರ ಪ್ರಕರಣದಲ್ಲಿ ನೇಮಕಾತಿ ಪ್ರಾಧಿಕಾರದಿಂದ ( ಆಯುಕ್ತರಿಂದ ) ಸೇವಾ ಪ್ರಮಾಣ ಪತ್ರ ಪಡೆಯಬೇಕು ಎಂದಿದ್ದು , ಅರ್ಜಿ ಸಲ್ಲಿಸಲು ಆಗುವ ವಿಳಂಬವನ್ನು ತಪ್ಪಿಸಲು ಅನುಕೂಲವಾಗುವಂತೆ ಆಯಾ ಜಿಲ್ಲಾ ಉಪನಿರ್ದೆಶಕರು ( ಆಡಳಿತ ) ಇವರಿಂದ ಸೇವಾ ಪ್ರಮಾಣ ಪತ್ರವನ್ನು ಪಡೆಯಲು ತಿಳಿಸಿದೆ. ಉಳಿದಂತೆ ಹೊರಡಿಸಲಾಗಿರುವ ಮಾರ್ಗಸೂಚಿ ಅಂಶಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಎಂದು ತಿಳಿದುಬಂದಿದೆ. ( ಮಾನ್ಯ ಆಯುಕ್ತರಿಂದ ಅನುಮೋದಿಸಲ್ಪಟ್ಟಿದೆ )


ಪರಿಸ್ಕೃತ ವರ್ಗಾವಣೆಯ ವೇಳಾಪಟ್ಟಿ👇👇ಶುಕ್ರವಾರ, ಜನವರಿ 6, 2023

ಇಲಾಖಾ ಪರೀಕ್ಷೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನ!

ಇಲಾಖಾ ಪರೀಕ್ಷೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ!2021 ರ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ : ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 12/01/2023 II. 31/01/2023 


ಅರ್ಜಿ ಸಲ್ಲಿಸುವ ವಿಧಾನ : 

ಇಲಾಖಾ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕರ್ನಾಟಕ ಲೋಕಸೇವಾ ಆಯೋಗದ ( KPSC ) ವೆಬ್‌ಸೈಟ್ http://www.kpsc.kar.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವ ವಿಧಾನಕ್ಕಾಗಿ ಅನುಬಂಧ -1 ರಲ್ಲಿನ ಮಾಹಿತಿಯನ್ನು ನಮೂದಿಸಲಾಗಿದೆ . 


ಅರ್ಹತೆ : 

I. ಈ ಕೆಳಕಂಡ ನೌಕರರು ಇಲಾಖಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ . 

ಅ ) ಸರ್ಕಾರಿ ನೌಕರರು . 

ಆ ) ಸರ್ಕಾರಿ ಸ್ವಾಮ್ಯಕ್ಕೊಳಪಟ್ಟ ನಿಗಮ / ಮಂಡಳಿ / ಸ್ಥಳೀಯ ಸಂಸ್ಥೆಗಳು / ವಿಶ್ವವಿದ್ಯಾಲಯಗಳ / ಪ್ರಾಧಿಕಾರಗಳ ಖಾಯಂ ನೌಕರರು , ಗ್ರೂಪ್ - ' ಡಿ ' ನೌಕರರು ಇಲಾಖಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.


ಅಭ್ಯರ್ಥಿಗಳಿಗೆ ವಿಶೇಷ ಸೂಚನೆಗಳು : 

ಅ ) ಇಲಾಖಾ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಸಂಬಂಧ ಅಭ್ಯರ್ಥಿಗಳು ಅನುಬಂಧ -2 ರಲ್ಲಿನ ಸೂಚನೆಗಳನ್ನು ಓದಿಕೊಳ್ಳತಕ್ಕದ್ದು.

ಆ ) ಸಬಾರ್ಡಿನೇಟ್ ಅಕೌಂಟ್ಸ್ ಸರ್ವೀಸಸ್ ( ಎಸ್.ಎ.ಎಸ್ . ) ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಅಭ್ಯರ್ಥಿಗಳು ಅನುಬಂಧ -3 ರಲ್ಲಿನ ವಿಶೇಷವಾದ ಸೂಚನೆಗಳನ್ನು ನಮೂದಿಸಲಾಗಿದೆ.

ಇ ) ಇಲಾಖಾ ಪರೀಕ್ಷೆಗಳನ್ನು ಆಪ್ ಲೈನ್ ಓಎಂಆರ್ ಮಾದರಿ ( Offline / OMR type ) ಅಥವಾ ಗಣಕ ಯಂತ್ರದ ಮೂಲಕ ( Computer Based Test - CBT ) ಮುಖಾಂತರ ನಡೆಸಲಾಗುವುದು.ಈ ವಿಷಯದಲ್ಲಿ ಆಯೋಗದ ತೀರ್ಮಾನವೇ ಅಂತಿಮವಾಗಿರುತ್ತದೆ

ಈ ) ಆನ್ ಲೈನ್ ಅರ್ಜಿ ಸಲ್ಲಿಸುವಾಗ ಸ್ಪಷ್ಟವಾದ ಇತ್ತೀಚಿನ ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡತಕ್ಕದ್ದು . ಇಲ್ಲವಾದಲ್ಲಿ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಉ ) ಸಕ್ರಿಯವಾಗಿರುವ ಇ - ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಅರ್ಜಿಯಲ್ಲಿ ನಮೂದಿಸತಕ್ಕದ್ದು ಹಾಗೂ ಪರೀಕ್ಷಾ ಪ್ರಕ್ರಿಯೆ ಮುಕಾಯಗೊಳ್ಳುವವರೆಗೂ ಇರತಕ್ಕದ್ದು.


ವಿಷಯ ಸಂಕೇತಗಳು ಮತ್ತು ಪ್ರತಿ ವಿಷಯಕ್ಕೆ ನಿಗದಿಪಡಿಸಿದ ಶುಲ್ಕದ ವಿವರಗಳು : 

ಇಲಾಖಾ ಪರೀಕ್ಷೆಯ ವಿವಿಧ ವಿಷಯಗಳು , ಅವುಗಳ ಸಂಕೇತಗಳು ಹಾಗೂ ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 6 ಸೇಲೋಸೇ 2010 , ದಿನಾಂಕ : 06/08/2010 ರನ್ವಯ ನಿಗದಿಪಡಿಸಿರುವ ಶುಲ್ಕಗಳ ವಿವರಗಳನ್ನು ಅನುಬಂಧ -4 ರಲ್ಲಿ ನಮೂದಿಸಲಾಗಿದೆ. 


ಪರೀಕ್ಷಾ ಕೇಂದ್ರಗಳು : 

ಇಲಾಖಾ ಪರೀಕ್ಷೆಗಳನ್ನು ಒಟ್ಟು 02 ಹಂತಗಳಲ್ಲಿ ನಡೆಸಲು ಉದ್ದೇಶಿಸಲಾಗಿದ್ದು , ಪ್ರಥಮ ಹಂತದಲ್ಲಿ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ , ದ್ವಿತೀಯ ಹಂತದಲ್ಲಿ ಬೆಂಗಳೂರು ಜಿಲ್ಲಾ ಕೇಂದ್ರದಲ್ಲಿ ಮಾತ್ರ ನಡೆಸಲಾಗುವುದು . ಆದಾಗ್ಯೂ ಪರೀಕ್ಷಾ ಕೇಂದ್ರಗಳ ನಿಗದಿಪಡಿಸುವಿಕೆಯು ಆಯೋಗದ ತೀರ್ಮಾನಕ್ಕೊಳಪಟ್ಟಿರುತ್ತದೆ . ಸದರಿ ಮಾಹಿತಿಯನ್ನು ಅನುಬಂಧ -5 ರಲ್ಲಿ ನಮೂದಿಸಲಾಗಿದೆ.


ಪಠ್ಯ ಕ್ರಮ : 

ಇಲಾಖಾ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ವಸ್ತುನಿಷ್ಠ ಬಹು ಆಯ್ಕೆ ಮಾದರಿಯ ಒಟ್ಟು 99 ಪತ್ರಿಕೆಗಳಿಗೆ ಹಾಗೂ ವಿವರಣಾತ್ಮಕ ಮಾದರಿಯ ಒಟ್ಟು 19 ಪತ್ರಿಕೆಗಳಿಗೆ ಪರೀಕ್ಷೆ ನಡೆಸಲಾಗುತ್ತಿದ್ದು , ಮಾಹಿತಿಯನ್ನು ಅನುಬಂಧ -6 ರಲ್ಲಿ ನಮೂದಿಸಲಾಗಿದೆ. 


ಪರೀಕ್ಷಾ ವೇಳಾಪಟ್ಟಿ : 

2021 ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ಒಟ್ಟು 02 ಹಂತಗಳಲ್ಲಿ ನಡೆಸಲು ಉದ್ದೇಶಿಸಿದ್ದು , ಸದರಿ ಪರೀಕ್ಷೆಗಳ ವೇಳಾಪಟ್ಟಿಯನ್ನು ನಂತರದಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಲಾಗುತ್ತದೆ . ವಿನಾಯಿತಿ : ನಿಯಮಾನುಸಾರ ಹಿಂದಿನ ಎರಡು ವರ್ಷಗಳ ಅವಧಿಯಲ್ಲಿ ಇಲಾಖಾ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳ ಆಧಾರದ ಮೇರೆಗೆ ಹಾಗೂ ಅಭ್ಯರ್ಥಿಗಳು ಹೊಂದಿರುವ ಶೈಕ್ಷಣಿಕ ವಿದ್ಯಾರ್ಹತೆ ಮೇರೆಗೆ ಕೆಲವು ವಿಷಯಗಳಿಗೆ / ಪತ್ರಿಕೆಗಳಿಗೆ ವಿನಾಯಿತಿಯನ್ನು ನೀಡಲು ಅವಕಾಶವಿದೆ.


ಅಂಧ / ಅಂಗವಿಕಲ ಅಭ್ಯರ್ಥಿಗಳ ಕುರಿತು

ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 272 ಸನಿನಿ 2013 , ದಿನಾಂಕ : 11/02/2021 ರಂತೆ ಅಂಗವಿಕಲ ನಿಯಮಗಳನ್ವಯ ಪರೀಕ್ಷೆ ಬರೆಯಲು ದೈಹಿಕ ಅಸಮರ್ಥತೆ ಹೊಂದಿರುವ ಅಭ್ಯರ್ಥಿಗಳಿಗೆ ಆಯೋಗವು ಇಲಾಖಾ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ . ಅಂಧ / ದೈಹಿಕ ಅಸಮರ್ಥತೆಯುಳ್ಳ ಅಭ್ಯರ್ಥಿಗಳು ಲಿಪಿಕಾರರ ಸಹಾಯದೊಂದಿಗೆ ಪರೀಕ್ಷೆಗೆ ಹಾಜರಾಗುವ ಕುರಿತಾದ ಮಾಹಿತಿಯನ್ನು ಅನುಬಂಧ -9 ರಲ್ಲಿ ನಮೂದಿಸಲಾಗಿದೆ.


ಕನ್ನಡ ಭಾಷಾ ಪರೀಕ್ಷೆ ಕುರಿತು : 

ಅಖಿತ ಭಾರತ ಸೇವೆಗಳಾದ ಐ.ಎ.ಎಸ್ . , ಐ.ಪಿ.ಎಸ್ . ಮತ್ತು ಐ.ಎಫ್.ಎಸ್ . ಅಭ್ಯರ್ಥಿಗಳು ಕಡ್ಡಾಯವಾಗಿ ವಿಷಯ ಸಂಕೇತ -72 ಅನ್ನು ಆಯ್ಕೆ ಮಾಡಿಕೊಳ್ಳಬೇಕು ಹಾಗೂ ಇತರೆ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ವಿಷಯ ಸಂಕೇತ -47 ನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು . ಮಾಹಿತಿಯನ್ನು ಅನುಬಂಧ -10 ರಲ್ಲಿ ನಮೂದಿಸಲಾಗಿದೆ.


ನೂತನ / ಇತ್ತೀಚಿನ ತಿದ್ದುಪಡಿಗಳು : 

ಇಲಾಖಾ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕೆಲವು ಇಲಾಖೆಗಳ ಪಠ್ಯಕ್ರಮಗಳು ಪರಿಷ್ಕೃತ / ತಿದ್ದುಪಡಿಗೊಂಡಿದ್ದು , ಮಾಹಿತಿಯನ್ನು ಅನುಬಂಧ -11 ರಲ್ಲಿ ನಮೂದಿಸಲಾಗಿದೆ.


ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುವ ವಿಧಾನ :

ಅಭ್ಯರ್ಥಿಗಳು ಇಲಾಖಾ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ವಿಧಾನವನ್ನು ಅನುಬಂಧ -12 ರಲ್ಲಿ ನಮೂದಿಸಲಾಗಿದೆ.


ಪ್ರಮಾಣಪತ್ರಗಳ ವಿತರಣೆ / ನೈಜತೆಯ ಪ್ರಮಾಣಪತ್ರಗಳ ಬಗ್ಗೆ : ಇಲಾಖಾ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಅಭ್ಯರ್ಥಿಗಳು ಮೂಲ ಪ್ರಮಾಣಪತ್ರಗಳನ್ನು ಪಡೆಯುವ ಬಗ್ಗೆ ಹಾಗೂ ಅವುಗಳ ನೈಜತೆಯ ಕುರಿತಂತೆ ಅನುಬಂಧ -13 ರಲ್ಲಿ ನಮೂದಿಸಲಾಗಿದೆ.


ಅಂಕಗಳ ಮರುಎಣಿಕೆ ಕುರಿತು : 

ಇಲಾಖಾ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡ ನಂತರ ಮರು ಮೌಲ್ಯಮಾಪನಕ್ಕೆ ಅವಕಾಶವಿರುವುದಿಲ್ಲ . ಆದರೆ 19 ವಿವರಣಾತ್ಮಕ ಮಾದರಿಯ ಉತ್ತರ ಪತ್ರಿಕೆಗಳಿಗೆ ಸಂಬಂಧಿಸಿದಂತೆ ಅಂಕಗಳ ಮರು ಎಣಿಕೆಗೆ ಅವಕಾಶ ನೀಡಲಾಗಿದೆ ವಿವರಗಳನ್ನು ಅನುಬಂಧ -14 ರಲ್ಲಿ ನಮೂದಿಸಲಾಗಿದೆ. 


(ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಓದಿ)


Notification 👉 Click here